×
Ad

ಕಲಬುರಗಿ | ಫೆ.17 ರಿಂದ 24ರವರೆಗೆ ರಸ್ತೆ ಸಂಚಾರ ಗಣತಿ ಕಾರ್ಯ

Update: 2025-02-11 20:08 IST

Photo credit: PTI

ಕಲಬುರಗಿ : ಲೋಕೋಪಯೋಗಿ ಇಲಾಖೆಯಿಂದ 2025ನೇ ಸಾಲಿಗೆ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಗಣತಿ ಕಾರ್ಯವನ್ನು ಫೆ.17ರ ಬೆಳಿಗ್ಗೆ 6 ರಿಂದ 24ರ ಬೆಳಗಿನ 6 ಗಂಟೆಯವರೆಗೆ ಸತತವಾಗಿ ಏಳು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ವೃತ್ತದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕರು ಅಭಿಯಂತರರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಪ್ರತಿ 5 ವರ್ಷಕ್ಕೊಮ್ಮೆ 7 ದಿನಗಳ ಕಾಲ ವಾಹನ ಸಂಚಾರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಈ ರಸ್ತೆ ಸಂಚಾರ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯು ಸರ್ಕಾರಕ್ಕೆ ರಸ್ತೆಗಳ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯಲು, ರಸ್ತೆಗಳ ಅಗಲತೆ ನಿರ್ಧರಿಸಲು, ರಸ್ತೆ ಮೇಲ್ದರ್ಜೆಗೇರಿಸಲು ಹಾಗೂ ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News