×
Ad

ಕಲಬುರಗಿ | ಕಲಾ ಸಂಸ್ಥೆಗಳ ಮೂಲಕ ಗ್ರಾಮೀಣ ಜನಪದ ಜೀವಂತ : ಸುಬ್ಬಣ್ಣಾ ಬುಜುರ್ಕೆ

Update: 2025-04-03 18:46 IST

ಕಲಬುರಗಿ : ಗ್ರಾಮೀಣ ಕಲಾ ಸಂಸ್ಥೆಗಳಿಂದಾಗಿಯೇ ಇಂದು ಗ್ರಾಮೀಣ ಭಾಗದಲ್ಲಿ ಬಸವಾದಿ ಶಿವಶರಣ ವಚನಗಳಂತ ಗಾಯನಗಳು, ಜನಪದ ಹಾಡುಗಳು, ಸಂತ ದಾಸರ ಪದಗಳು ಇಂದಿಗೂ ಜೀವಂತವಾಗಿವೆ. ಇವುಗಳ ಕುರಿತು ಇನ್ನಷ್ಟು ಸಂಶೋಧನೆಗಳ ಕೃತಿ ರೂಪದಲ್ಲಿ ಬೆಳಕಿಗೆ ಬರಲು ಸಂಶೋಧಕರು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಾಳತಡಲ್ ಗ್ರಾಮದ ಹಿರಿಯ ಮುಖಂಡ ಸುಬ್ಬಣ್ಣಾ ಬುಜುರ್ಕೆ ಅವರು ಹೇಳಿದರು.

ಆಳಂದ ತಾಲೂಕಿನ ನಸೀರವಾಡಿ ಗ್ರಾಮದ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆಯು ವಳವಂಡವಾಡಿ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಶಿಸಿ ಹೋಗುತ್ತಿರುವ ಜನಪದರ ಹಾಡುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಸೀರವಾಡಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆಯು ವಚನ ಗಾಯನ ಹಮ್ಮಿಕೊಂಡು ಸಾಂಪ್ರದಾಯಿಕ ಭಕ್ತಿಯ ಹಾಡುಗಳನ್ನು ಇಂದಿನ ಜನಾಂಗಕ್ಕೆ ಮುಟ್ಟಿಸುವ ಬಹುದೊಡ್ಡ ಕೆಲಸವನ್ನು ಮಾಡುತ್ತಿದೆ. ಇಂಥ ಸಂಸ್ಥೆಗಳು ಉಳಿದು ಬೆಳೆದು ಬರಲು ಸಮಾಜ ಮತ್ತು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಪಾಟೀಲ, ಸಂಸ್ಥೆಯ ಅಧ್ಯಕ್ಷ ತಾತೇರಾವ್ ಪಾಟೀಲ, ಅತಿಥಿಗಳಾಗಿ ರಾಯಪ್ಪ ಮುಳಜೆ, ಭೀಮಶಾ ಪೂಜಾರಿ, ಬಸವರಾಜ ಬೆಳಮಗಿ ಪಾಳ್ಗೊಂಡು ಮಾತನಾಡಿದರು.

ಈ ಸಂದರ್ಭಧಲ್ಲಿ ಜಾನಪದ ಕಲಾವಿದೆ ಚಂದ್ರಕಲಾ ಏ.ಏಕ್ಕುಳಕೆ, ಮಲ್ಲಮ್ಮಾ ಬಿ.ಪೂಜಾರಿ, ವೆಂಕಟ ಸೀತಾಳಗೇರೆ. ಸುಲೇಚನಾ ತೀರ್ಥ, ಮಹಾನಂದ ಕೆ.ನರೋಣಾ, ಶಂಕರೆಪ್ಪ ಕಾಳೆ, ಈರಣ್ಣ ಕಲಶೆಟ್ಟಿ, ವಿಕ್ರಂ ಸೀತಾಳಗೇರೆ, ಧನ್ನರಾಜ ಡೋಣಿ, ಬಲಭೀಮ ಸೀತಾಳಗೇರೆ, ರಾಯಪ್ಪ ಗುತ್ತೆವಾಲೆ, ಕಮಲಾಬಾಯಿ ಸಾಸ್ತುರೆ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದು ಬಸವಾದಿ ಶರಣರ ವಚನಗಳ ಗಾಯನ ನಡೆಸಿಕೊಟ್ಟು ಜನಮನ ತಣ್ಣಿಸಿ ಮೆಚ್ಚಿಗೆಗೆ ವ್ಯಕ್ತವಾದರು. ಗ್ರಾಮದ ಮಹಿಳೆಯರು ಹಿರಿಯರು ಕಲಾ ಆಸಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಯುವ ಮುಖಂಡ ಯಲ್ಲಾಲಿಂಗ ಟಿ.ಪಾಟೀಲ ನಿರೂಪಿಸಿದರು. ರಾಜೇಶ್ವರಿ ಟಿ.ನಸೀರವಾಡಿ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News