ಕಲಬುರಗಿ | ಶಾಲಾ ವಿದ್ಯಾರ್ಥಿನಿಯ ಅತ್ಯಾಚಾರ: ಆರೋಪಿ ಅತಿಥಿ ಶಿಕ್ಷಕನ ಬಂಧನ
ಶಿವರಾಜ್ ಹಣಮಂತ ಸಾಗವಳೆ
ಕಲಬುರಗಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅತಿಥಿ ಶಿಕ್ಷಕನೋರ್ವನನ್ನು ಬಂಧಿಸಿರುವ ಘಟನೆ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಶಿವರಾಜ್ ಹಣಮಂತ ಸಾಗವಳೆ (32) ಬಂಧಿತ ಅತಿಥಿ ಶಿಕ್ಷಕ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮವೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಟಿವಿ ನೋಡುತ್ತಿದ್ದ ಆರೋಪಿ ಶಿಕ್ಷಕ ಶಿವರಾಜ್ ಮನೆಗೆ ನುಗ್ಗಿದ್ದಾನೆನ್ನಲಾಗಿದೆ. ಪ್ರೀತಿಯ ನಾಟಕವಾಗಿ ಬಾಲಕಿಯನ್ನು ಪುಸಲಾಯಿಸಿ, ಹೆದರಿಸಿ ಅತ್ಯಾಚಾರ ಎಸೆಗಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಕೃತ್ಯದಿಂದ ಅಸ್ವಸ್ಥಗೊಂಡಿರುವ ಬಾಲಕಿಯನ್ನು ಪೋಷಕರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ..
ಪೋಷಕರ ದೂರಿನ ಆಧಾರದಲ್ಲಿ ಆರೋಪಿ ಅತಿಥಿ ಶಿಕ್ಷಕ ಶಿವರಾಜ್ ನನ್ನು ಬಂಧಿಸಿರುವ ಮಾದನ ಹಿಪ್ಪರಗಾ ಠಾಣೆಯ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.