×
Ad

ಕಲಬುರಗಿ | ಮಾ.11ರಂದು 'ಸತ್ತವರ ನೆರಳು' ನಾಟಕ ಪ್ರದರ್ಶನ

Update: 2025-03-09 19:17 IST

ಕಲಬುರಗಿ: ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣ ಸಂಯುಕ್ತಾಶ್ರಯದಲ್ಲಿ ಇದೇ‌ ಮಾ.11 ರಂದು ಸಂಜೆ 6 ಗಂಟೆಗೆ ರಂಗಾಯಣದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸತ್ತವರ ನೆರಳು ನಾಟಕ ಪ್ರದರ್ಶನ ನಡೆಯಲಿದೆ.

ಕರ್ನಾಟಕ ಶೈಕ್ಷಣಿಕ ಸುಧಾರಣಾ‌ ಸಮಿತಿ ಸದಸ್ಯರು ಮತ್ತು ಹಿರಿಯ ರಂಗಕರ್ಮಿ ಡಾ.ನಾಗಾಬಾಯಿ ಬಿ. ಬುಳ್ಳಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಬಸವರಾಜ ಹೂಗಾರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಹಿರಿಯ ರಂಗಕರ್ಮಿ ಸಂಧ್ಯಾ ಹೊನಗುಂಟಿಕರ್ ಅವರು ಮಹಿಳೆ ಮತ್ತು ರಂಗಭೂಮಿ ಕುರಿತು ಮಾತನಾಡಲಿದ್ದು, ವೀರ ಮಹಿಳೆ ಪುರಸ್ಕೃತೆ ಡಾ.ವಿಶಾಲಾಕ್ಷಿ ರೆಡ್ಡಿ, ಕೃಷಿ ಮತ್ತು ಕಾರ್ಮಿಕ ಹೊರಾಟಗಾರ್ತಿ ಗೌರಮ್ಮ ಪಿ.ಪಾಟೀಲ ಹಾಗೂ ಸ್ಲಂ ಜನಾಂದೋಲನ ಹೋರಾಟಗಾರ್ತಿ ರೇಣುಕಾ ಸರಡಗಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ನಾಟಕ ಪ್ರದರ್ಶನ :

ಹುಲುಗಪ್ಪ ಕಟ್ಟಿಮನಿ ನಿರ್ದೇಶನ ಮತ್ತು ರಾಘವ ಕುಮಾರ ಅವರ ಸಂಗೀತ ರಚನೆಯ ಸತ್ತವರ ನೆರಳು ನಾಟಕವನ್ಜು ರಂಗಾಯನದ ರೆಪರ್ಟಿ ಕಲಾವಿದರು ಪ್ರಸ್ತುಪಡಿಸುವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News