×
Ad

ಕಲಬುರಗಿ | ನಿಜಲಿಂಗ ಮುಗಳಿಗೆ ʼಶ್ರೀ ಅಕ್ಕ ಯಾದಗಿರಿ ರಾವ್ʼ ಪ್ರಶಸ್ತಿ ಪ್ರದಾನ

Update: 2025-02-22 17:28 IST

ಕಲಬುರಗಿ : ಇತ್ತೀಚಿಗೆ ಹೈದಾರಬಾದ್‌ ಆರ್ಟ್ ಸೊಸೈಟಿಯ, 84ನೇ ಆಲ್ ಇಂಡಿಯಾ ಅನುವಲ್ ಆರ್ಟ್ ಎಕ್ಸಿಬಿಷನ್ ಕಾರ್ಯಕ್ರಮದಲ್ಲಿ ನಿಜಲಿಂಗ ಮುಗಳಿ ಅವರಿಗೆ “ಸ್ತ್ರೀಟ್” ಚಿತ್ರಕಲಾಕೃತಿಗೆ ಹೈದರಬಾದ್ ಆರ್ಟ್ ಸೊಸೈಟಿಯ ಅಧ್ಯಕ್ಷರಾದ ಎಂ.ವಿ ರಮಣ ರೆಡ್ಡಿ ಅವರು ʼಶ್ರೀ ಅಕ್ಕ ಯಾದಗಿರಿ ರಾವ್ʼ ಪ್ರಶಸ್ತಿ ನೀಡಿ ಗೌರವಿಸಿದರು.

ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ, ಸ್ನಾತಕೋತ್ತರ ಚಿತ್ರಕಲಾ ವಿಭಾಗದ ಸಹಾಯಕ ಪ್ರಾಧ್ಯಪಕರು ಹಾಗೂ ವಿಭಾಗದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ನಿಜಲಿಂಗ ಮುಗಳಿ ಅವರು ಭಾರತದ ಪ್ರತಿಷ್ಠಿತ ಕಲಾ ಪಶಸ್ತಿಯಲ್ಲಿ ಹೆಸರಾದ ಹೈದಾರಬಾದ್ ಆರ್ಟ್ ಸೊಸೈಟಿಯಲ್ಲಿ 84ನೇ ಆಲ್ ಇಂಡಿಯಾ ಅನುವಲ್ ಆರ್ಟ್ ಎಕ್ಸಿಬಿಷನ್ ಲ್ಲಿ ತನ್ನ ಸ್ತ್ರೀಟ್ ಚಿತ್ರಕಲಾಕೃತಿ ಪ್ರದರ್ಶಿಸಿದ್ದರು.

ಹೈದಾರಬಾದ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ತೆಲಂಗಾಣದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಚಾಲನೆ ನೀಡಿದ್ದರು. ಆರ್ಟ್ ಸೊಸೈಟಿಯ ಕಾರ್ಯದರ್ಶಿ ಜೆ ವೆಂಕಟೇಶ್ವರಲು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News