×
Ad

ಕಲಬುರಗಿ | ರೈತರು, ತಂತ್ರಜ್ಞರಿಗೆ ವಿಶೇಷ ತರಬೇತಿ : ಹೆಸರು ನೋಂದಣಿಗೆ ಜೂ.26 ಕೊನೆಯ ದಿನ

Update: 2025-06-24 21:37 IST

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನಲ್ಲಿ ರೈತರು ಮತ್ತು ಕೃಷಿ ಪಂಪ್ ಉಪಕರಣಗಳ ತಂತ್ರಜ್ಞರಿಗೆ ಬಿಇಇ ಸ್ಟಾರ್ ಲೇಬಲ್‍ವುಳ್ಳ ಇಂಧನ ದಕ್ಷ ಪಂಪ್‌ಸೆಟ್ ಮತ್ತು ನೀರಿನ ಸಂರಕ್ಷಣೆ ಕುರಿತು ಇದೇ ಜೂ.27 ರಂದು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಸಕ್ತಿಯುಳ್ಳ ರೈತರು, ಸಿ.ಹೆಚ್.ಸಿ. ಟೆಕ್ನಿಶಿಯನ್ಸ್/ ಮ್ಯಾನೇಜರ್ಸ್ (CHC Technicians /Managers) ಹಾಗೂ ಕೃಷಿ ಉಪಕರಣಗಳು/ಕೃಷಿ ಪಂಪಸೆಟ್ ತಂತ್ರಜ್ಞರು 2025ರ ಜೂ.26 ರೊಳಗಾಗಿ ತಮ್ಮ ಹೆಸರನ್ನು ಕೃಷಿ ಅಧಿಕಾರಿಗಳಾದ ಸುಜಾತಾ ಆರ್.ರಾಜನಾಳಕರ- 94486512021 ಹಾಗೂ ಯಾಸ್ಮೀನ್ ಇವರ ಮೊಬೈಲ್ ಸಂಖ್ಯೆ 9901604822 ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಎಫ್.ಐ.ಡಿ. ಹೊಂದಿರುವ ಆಸಕ್ತಿಯುಳ್ಳ ರೈತರು ನೊಂದಾಯಿಸಿಕೊಳ್ಳಬೇಕು. ಎಫ್.ಐ.ಡಿ. ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ತರಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೋಟನೂರ (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News