×
Ad

ಕಲಬುರಗಿ | ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನಾಚರಣೆ ನಿಮಿತ್ತ ಸ್ತಬ್ಧ ಚಿತ್ರಗಳ ಮೆರವಣಿಗೆ

Update: 2025-09-05 22:35 IST

ಕಲಬುರಗಿ: ಪ್ರವಾದಿ ಮುಹಮ್ಮದ್(ಸ) ಅವರ 1500ನೇ ಜನ್ಮ ದಿನಾಚರಣೆ ನಿಮಿತ್ತ ಜಶ್ನ್-ಎ-ಈದ್ ಮಿಲಾದ್-ಉನ್-ನಬಿ (ಸ.ಅ.ವ.) ಹಾಗೂ 46ನೇ ಮಿಲಾದ್ ಜಲೂಸ್ ಗೆ ಶುಕ್ರವಾರ ಮಘ್ರಿಬ್ ನಮಾಝ್ ನಂತರ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಜಲೂಸ್ ಗೆ ಬಂದಾ ನವಾಝ್ ದರ್ಗಾದ ಸಜ್ಜಾದೆ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ, ಕೆಬಿಎನ್ ವಿವಿಯ ಕುಲಾಧಿಪತಿಗಳಾದ ಹಜ್ರತ್ ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಹುಸೈನಿ ಸಾಹೇಬ್ ಹಾಗೂ ಮಾರ್ಕಜಿ ಸೀರತ್-ಉನ್-ನಬಿ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಫರಾಜ್-ಉಲ್-ಇಸ್ಲಾಮ್ ಅವರು ಚಾಲನೆ ನೀಡಿದರು.

ಜಲೂಸ್‌ನಲ್ಲಿ 200ಕ್ಕೂ ಹೆಚ್ಚು ಅದ್ಭುತ ಅಲಂಕೃತ ಜ್ಹಾಂಕಿ (ಝಾನಕಿಗಳು/ಟೇಬ್ಲೊಗಳು) ಭಾಗವಹಿಸಿದ್ದು, ನಗರದಲ್ಲಿನ ಪ್ರಮುಖ ಮಾರ್ಗಗಳಾದ ಮುಸ್ಲಿಂ ಚೌಕ್, ಮಿಜ್ಗೋರಿ, ನೆಹರೂ ಗಂಜ್, ಕಿರಾಣಾ ಬಜಾರ್, ಕ್ಲಾತ್ ಬಜಾರ್, ಗಣೇಶ್ ಮಂದಿರ, ಬಹಮನಿ ಚೌಕ್ ಮಾರ್ಗವಾಗಿ ಸಾಗುತ್ತಾ ಹಫ್ತ್ ಗುಂಬಜ್ ಬಳಿ ಮುಕ್ತಾಯವಾಯಿತು.

ಈ ಸಂದರ್ಭದಲ್ಲಿ ಅನ್ವರುಲ್ ಹಕ್ ಮೊಟಿ ಸೇಠ್, ಅಹ್ಮರ್-ಉಲ್-ಇಸ್ಲಾಮ್, ಜೈದುಲ್-ಇಸ್ಲಾಮ್, ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ., ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್‌ಗಳು ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

ನಗರದ ಬೀದಿಗಳು ಈ ವಿಶೇಷ ಸಂದರ್ಭವನ್ನು ಸೂಚಿಸಲು ವಿದ್ಯುತ್ ದೀಪಾಲಂಕಾರ ಹಾಗೂ ಸಿಂಗರಿಕೆಯಿಂದ ಕಂಗೊಳಿಸುತ್ತಿದ್ದವು. ಮುಸ್ಲಿಂ ಸಮುದಾಯದ ಸಾವಿರಾರು ಜನರು ಈ ಆಚರಣೆಯಲ್ಲಿ ಭಾಗವಹಿಸಿದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News