×
Ad

ಕಲಬುರಗಿ | ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟಕ್ಕೆ ಸುನಿಲ್‌ಕುಮಾರ್ ನೇಮಕ

Update: 2024-11-26 17:30 IST

ಕಲಬುರಗಿ : ಜಿಲ್ಲಾ ದಲಿತ ಸೇನೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಆಳಂದ ತಾಲ್ಲೂಕಿನ ವೈಜಾಪೂರ ಗ್ರಾಮದ ಸುನಿಲ್‌ಕುಮಾರ್ ಎಂ.ಸಿಂಗೆ ಅವರನ್ನು ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರು ನೇಮಿಸಿದ್ದಾರೆ.

ಆಳಂದ ಪಟ್ಟಣದಲ್ಲಿ ನಡೆದ ದಲಿತ ಸೇನೆ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಅವರನ್ನು ನೇಮಿಸಿದ ಹನುಮಂತ ಯಳಸಂಗಿ ಅವರು, ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ನಿರ್ವಹಿಸುವಂತೆ ಹೇಳಿದರು.

ಸಭೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ, ಉಪಾಧ್ಯಕ್ಷ ಚಂದ್ರಕಾoತ ಹೊಸಮನಿ, ಆಳಂದ ತಾಲ್ಲೂಕು ಅಧ್ಯಕ್ಷ ಚಂದ್ರಶಾ ಗಾಯಕವಾಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಕಟ್ಟಿಮನಿ ಸೇರಿದಂತೆ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News