×
Ad

ಕಲಬುರಗಿ | ಅಪ್ರಾಪ್ತ ಬಾಲಕಿಯನ್ನು ಬಸ್ಸಿನಿಂದ ಕೆಳಗಿಳಿಸಿ ಕತ್ತು ಕೊಯ್ದು ಪರಾರಿಯಾದ ಬಾಲಕರು

Update: 2024-02-22 17:55 IST

ಕಲಬುರಗಿ : ಇಬ್ಬರು ಬಾಲಕರು ಅಪ್ರಾಪ್ತ ಬಾಲಕಿಯನ್ನು ಬಸ್ಸಿನಿಂದ ಕೆಳಗಿಳಿಸಿ ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ಅಟ್ಟೂರ್ ಗ್ರಾಮದ ಹತ್ತಿರ ನಡೆದಿದೆ.

ಬೆಳಮಗಿ ಗ್ರಾಮದಿಂದ ವಿ.ಕೆ ಸಲಗರ್ ಗ್ರಾಮಗಳ ಮಧ್ಯೆ ಸಂಚರಿಸುತ್ತಿದ್ದ ಬಸ್ ಲ್ಲಿ ಈ ಘಟನೆ ನಡೆಸಿದೆ. ಚನ್ನವೀರ ಮತ್ತು ಆತನ ಸ್ನೇಹಿತ ಇಬ್ಬರು ಸೇರಿ ಕೃತ್ಯ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಎಂದಿನಂತೆ ಶಾಲೆಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಅಟ್ಟೂರ್ ಕ್ರಾಸ್ ಬಳಿ ಬೈಕ್ ನಲ್ಲಿ ಹಿಂಬಾಲಿಸಿದ ಇಬ್ಬರು ಯುವಕರು ಬಸ್ ನಲ್ಲಿದ 17 ವರ್ಷದ ಬಾಲಕಿಗೆ ಚಾಕು ತೋರಿಸಿ ಬಾಲಕಿಯನ್ನು ಕೆಳಗಿಳಿಸಿದ ನಂತರ ಕತ್ತು ಕೊಯ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

17 ವರ್ಷದ ಬಾಲಕ ಈ ಕೃತ್ಯ ನಡೆಸಿ ಪರಾರಿಯಾದ್ದು, ಗಂಭೀರ ಸ್ಥಿತಿಯಲ್ಲಿರೋ ಬಾಲಕಿಯನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News