×
Ad

ಕಲಬುರಗಿ : ಬಾವಿಗೆ ಜಿಗಿದ ತಂಗಿಯನ್ನು ಕಾಪಾಡಲು ಹೋದ ಅಣ್ಣ, ಇಬ್ಬರೂ ಮೃತ್ಯು

Update: 2024-01-30 12:58 IST

ಚಿಂಚೋಳಿ: ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಅಣ್ಣ, ತಂಗಿ ರವಿವಾರ ರಾತ್ರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು, ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಸಂದೀಪ್‌ (23) ಹಾಗೂ ನಂದಿನಿ (19)ಯನ್ನು ಮೃತ ಅಣ್ಣ- ತಂಗಿ ಎಂದು ಗುರುತಿಸಲಾಗಿದೆ. ನಂದಿನಿ ಸಣ್ಣ ಸಣ್ಣ ವಿಚಾರಕ್ಕೂ ಹಠ ಮಾಡುತ್ತಿದ್ದಳು. ಪಿಯುಸಿ ನಂತರ ಓದನ್ನು ಮಧ್ಯದಲ್ಲೇ ನಿಲ್ಲಿಸಿದ್ದಳು. ಕಾಲೇಜಿಗೆ ಹೋಗು ಎಂದರೂ ಆಕೆ ಕೇಳದಿರುವುದಕ್ಕೆ ಮನೆಯಲ್ಲಿ ರವಿವಾರ ರಾತ್ರಿ ಜಗಳವಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ನೊಂದ ನಂದಿನಿ ಮನೆಯ ಪಕ್ಕದ ಬಾವಿಗೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಅಣ್ಣನೂ ಬಾವಿಗೆ ಹಾರಿದ್ದಾನೆ. ಪರಿಣಾಮ ಇಬ್ಬರಿಗೂ ಈಜು ಬಾರದೇ ಇರುವುದರಿಂದ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News