ಕಲಬುರಗಿ | ಕ್ರೀಡೆ ಇಲ್ಲದವನ ಜೀವನ ಕೀಡೆ ತಿಂದ ಹಣ್ಣಿನಂತೆ : ಪ್ರೊ.ಉಡಿಕೇರಿ ಅಭಿಮತ
ಕಲಬುರಗಿ : ಜ್ಞಾನ ಗಂಗಾ ಆವರಣದಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದೈಹಿಕ ಚಟುವಟಿಕೆಗೆ ಸಮಯ ನೀಡಬೇಕು, ಇಲ್ಲದಿದ್ದರೆ ಕ್ರೀಡೆ ಇಲ್ಲದವನ ಜೀವನ ಕೀಡೆ ತಿಂದ ಹಣ್ಣಿನಂತೆ ಆಗುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣ ನಡೆದ ಡಾ.ಬಿ.ಆರ್. ಅಂಬೇಡ್ಕರ್ 134ನೇ ಜಯಂತೋತ್ಸವ ನಿಮಿತ್ತ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದೈಹಿಕ ಶಿಕ್ಷಣ ವಿಭಾಗ ಪ್ರಾಂಶುಪಾಲ ಡಾ.ಎಚ್.ಎಸ್.ಜಂಗೆ ಮಾತನಾಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕ್ರೀಡೆ ಬಹುಮುಖ್ಯ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಚಂದ್ರಕಾಂತ ಯಾತನೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ ರಮೇಶ್ ಲಂಡನಕರ್, ಮೌಲ್ಯ ಮಾಪನ ಕುಲಸಚಿವ ಡಾ. ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕಾ, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಅಧ್ಯಕ್ಷ ಆನಂದ ಮೈತ್ರಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ಅಧ್ಯಕ್ಷ ಚಂದ್ರಕಾಂತ ಸಂಗೋಳಗಿ, ಉಪಾಧ್ಯಕ್ಷ ಕೇಮಣ್ಣ, ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ಎಸ್.ಪಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪುರುಷರ ಕ್ರಿಕೆಟ್ : ಪ್ರಥಮ ಸ್ಥಾನ ಅರ್ಥಶಾಸ್ತ್ರ ವಿಭಾಗ, ದ್ವಿತೀಯ ಸ್ಥಾನ ಇತಿಹಾಸ ವಿಭಾಗ.
ಮಹಿಳಾ ಕ್ರಿಕೆಟ್ : ಪ್ರಥಮ ಸ್ಥಾನ ರಾಜ್ಯ ಶಾಸ್ತ್ರ ವಿಭಾಗ, ದ್ವಿತೀಯ ಸ್ಥಾನ ವಾಣಿಜ್ಯ ವಿಭಾಗ.
ಮಹಿಳಾ ಥ್ರೊಬಲ್ : ಪ್ರಥಮ ಸ್ಥಾನ ವಾಣಿಜ್ಯ ವಿಭಾಗ, ದ್ವಿತೀಯ ಸ್ಥಾನ ಸೂಕ್ಷ್ಮ ಜೀವಶಾಸ್ತ್ರ.
ವಾಲಿಬಾಲ್ : ಪ್ರಥಮ ಸ್ಥಾನ ದೈಹಿಕ ಶಿಕ್ಷಣ ವಿಭಾಗ, ದ್ವಿತೀಯ ಸ್ಥಾನ ಕನ್ನಡ ಅಧ್ಯಯನ ಸಂಸ್ಥೆ.