×
Ad

ಕಲಬುರಗಿ | ವಿಶ್ವವಿದ್ಯಾಲಯವು ಮಾನವೀಯತೆ, ಸಹಿಷ್ಣುತೆ, ವೈಚಾರಿಕತೆಯ ಸಂಕೇತ: ಪ್ರೊ.ಜಿ.ಜಿ.ಮೂಲಿಮನಿ

Update: 2025-01-17 18:07 IST

ಕಲಬುರಗಿ : ವಿಶ್ವವಿದ್ಯಾಲಯವು ಮಾನವೀಯತೆ, ಸಹಿಷ್ಣುತೆ, ವೈಚಾರಿಕತೆ ಮತ್ತು ಸತ್ಯ ಶೋಧನೆಯ ಸಂಕೇತ ಎಂದು ವಿಶ್ರಾಂತ ಕುಲಪತಿ ಪ್ರೊ.ಜಿ.ಜಿ.ಮೂಲಿಮನಿ ಅಭಿಪ್ರಾಯಪಟ್ಟರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಕುಲಪತಿಗಳ ಸೇವಾ ಅವಧಿ ಮುಗಿಸಿದ ನಿಮಿತ್ತ ಇಂದು ನಡೆದ ಪ್ರೊ.ದಯಾನಂದ್ ಅಗಸರ್ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜೀವಂತ ಮತ್ತು ಜೀವನ ಬದುಕನ್ನು ಕಟ್ಟಿಕೊಳ್ಳಲು ಮಾರ್ಗವನ್ನು ತೋರಿಸುತ್ತದೆ. 21ನೇಯ ಶತಮಾನವು ಜ್ಞಾನದ ಯುಗವಾಗಿದೆ. ವಿದ್ಯೆಯೇ ಅಮೃತವೆಂದು ಜ್ಞಾನದ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಸ್ತುತ ಜಾಗತೀಕರಣದ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದ ಕೇಂದ್ರಬಿಂದುವಾದ ನಿವೃತ್ತಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರೊ.ದಯಾನಂದ ಅಗಸರ್, ಈ ನಿವೃತ್ತಿ ಸಂದರ್ಭದಲ್ಲಿ ಮೊದಲು ನಾನು ನೆನಪಿಸಿಕೊಳ್ಳಬೇಕಾಗಿದ್ದು, ನನ್ನ ತಂದೆ ತಾಯಿಯನ್ನು ಎಂಬ ಮಾತನ್ನಾಡುತ್ತಾ ಕಂಬನಿ ಮಿಡಿದರು. ವೃತ್ತಿ ಮತ್ತು ನಿವೃತ್ತಿ ಜೀವನ ಎರಡು ಅವಿಭಾಜ್ಯ ಅಂಗಗಳಾಗಿವೆ. ಒಬ್ಬ ಒಳ್ಳೆಯ ಶಿಕ್ಷಕ ತಾನೋಬ್ಬನೆ ಸಾಗದೆ ತನ್ನ ಜೋತೆಗಾರರನ್ನು ತನ್ನೊಂದಿಗೆ ಕರೆದು ಒಯ್ಯುವನೇ ನಿಜವಾದ ಶಿಕ್ಷಕ ಎಂದು ಹೇಳಿದರು.

ಜಿದ್ದು ಮತ್ತು ಸ್ನೇಹ ಬಾಂಧವ್ಯದಿಂದ ವೃತ್ತಿ ಜೀವನದಲ್ಲಿ ಬಂದ ಅಡೆತಡೆಗಳನ್ನು ಎದುರಿಸಿ ತಾಳ್ಮೆಯಿಂದ ಮುನ್ನುಗ್ಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಂಡಿಕೇಟ್ ಸದಸ್ಯರು ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರೋ.ಗೂರು ಶ್ರೀರಾಮುಲು, ಕುಲಸಚಿವರಾದ ಪ್ರೊ.ರಮೇಶ ಲಂಡನಕರ್ ಮಾತನಾಡಿದರು.

ಮುಖ್ಯ ಅತಿಥಿಗಳ ಪರಿಚಯವನ್ನು ಗಣಿತ ವಿಭಾಗದ ಪ್ರಾಧ್ಯಾಪಕ ಎಸ್.ಎನ್.ಗಾಯಕವಾಡ ಮಾಡಿದರು. ಕಾರ್ಯಕ್ರಮದಲ್ಲಿ ಮಾಲ್ಯಮಾಪನ ಕುಲಸಚಿವರಾದ ಮೇಧವಿನಿ ಕಟ್ಟಿ, ಸಿಂಡಿಕೇಟ್ ಸದಸ್ಯರಾದ ಡಾ.ರೇಷ್ಮಾ ಕೌರ, ವಿದ್ಯಾವಿಷಯಕ ಪರಿಷತನ ಸದ್ಯಸರಾದ ಪ್ರೊ.ಹೂವಿನಬಾವಿ ಬಾಬಣ್ಣ ಹಣಕಾಸು ಅಧಿಕಾರಿ ಗಾಯತ್ರಿ , ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕರ ಸಂಘ , ಶಿಕ್ಷಕೇತರ ನೌಕರರ ಸಂಘ , ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘ ಮತ್ತು ಗುತ್ತಿಗೆ ನೌಕರರ ಕಲ್ಯಾಣ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ನಿಕಾಯದ ಡೀನರು ಮತ್ತು ವಿಭಾಗ ಮುಖ್ಯಸ್ಥರು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ದಯಾನಂದ ಅಗಸರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News