ಕಲಬುರಗಿ | ವಾಡಿ ಪುರಸಭೆ ವಾರ್ಡ್ ಮೀಸಲಾತಿ ಪ್ರಕಟ; ಗರಿಗೆದರಿದ ಚುನಾವಣೆ ಚಟುವಟಿಕೆ
ಕಲಬುರಗಿ : ಈಗಾಗಲೇ ವಾಡಿ ಪುರಸಭೆ ಚುನಾವಣೆ 2 ವರ್ಷ ವಿಳಂಬವಾಗಿದ್ದು, ಸರಕಾರ ಫೆ.17 ರಂದು ವಾರ್ಡ್ ವಾರು ಮೀಸಲಾತಿ ಪ್ರಕಟವಾಗಿ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗೆ ವಾರದ ಗಡವು ನೀಡಿದ ಬೆನ್ನೆಲೆ ಎಲ್ಲೆಂದರಲ್ಲಿ ಚುನಾವಣೆ ಚಟುವಟಿಕೆ ಚುರುಕುಗೊಂಡಿವೆ.
ವಾಡಿ ಪುರಸಭೆಯ 23 ವಾರ್ಡ್ಗಳಿಗೆ ಮೀಸಲಾತಿ ಪ್ರಕಟ ಮಾಡಿದ್ದು, ವಾರ್ಡ್ ನಂ,1-ಬಸ್ಸಪ್ಪ ಖಣಿ, ಸಾಮಾನ್ಯ, ವಾರ್ಡ್ ನಂ, 2-ನಿಜಾಮ ಗೇಟ್ (ಬಲರಾಮ ಚೌಕ) ಸಾಮಾನ್ಯ, ವಾರ್ಡ್ ನಂ, 3-ಸೇವಾಲಾಲ ನಗರ ಸಾಮಾನ್ಯ (ಮಹಿಳೆ), ವಾರ್ಡ್ ನಂ, 4-ರಸ್ಟ್ ಕ್ಯಾಂಪ್ ತಾಂಡಾ ಸಾಮಾನ್ಯ, ವಾರ್ಡ್ ನಂ, 5-ಸೋನಾಬಾಯಿ ಏರಿಯಾ ಸಾಮಾನ್ಯ, ವಾರ್ಡ್ ನಂ, 6-ಜಾಂಬವೀರ ಕಾಲೋನಿ, ಪರಿಶಿಷ್ಟ ಜಾತಿ. ವಾರ್ಡ್ ನಂ, 7-ಬಿರ್ಲಾ ಏರಿಯಾ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 8-ಅಂಬೇಡ್ಕರ್ ಕಾಲೋನಿ, ಪರಿಶಿಷ್ಟ ಜಾತಿ. ವಾರ್ಡ್ ನಂ, 9-ಎಸಿಸಿ ಕಾಲೋನಿ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 10-ಜೆಎಸ್ಕ್ಯೂ ಕ್ಯಾಟರ್ಸ್ ಎಸಿಸಿ ಕಾಲೋನಿ, ಸಾಮಾನ್ಯ (ಮಹಿಳೆ).
ವಾರ್ಡ್ ನಂ, 11-ಪಿಲಕಮ್ಮ ಏರಿಯಾ, ಪರಿಶಿಷ್ಟ ಜಾತಿ. ವಾರ್ಡ್ ನಂ, 12-ಕಲಕಂ ಏರಿಯಾ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 13-ಮಲ್ಲಿಕಾರ್ಜುನ ಗುಡಿ ಏರಿಯಾ, ಸಾಮಾನ್ಯ. ವಾರ್ಡ್ ನಂ, 14-ಇರಾನಿ ಬಿಲ್ಲಿಂಗ್ ಚರ್ಚ್ ಏರಿಯಾ, ಪರಿಶಿಷ್ಟ ಜಾತಿ. ವಾರ್ಡ್ ನಂ, 15-ಮರಾಠ ಗಲ್ಲಿ, ಸಾಮಾನ್ಯ. ವಾರ್ಡ್ ನಂ, 16-ಭೀಮಾನಗರ ಮಾರ್ಕೆಟ್ ಏರಿಯಾ, ಪರಿಶಿಷ್ಟ ಜಾತಿ (ಮಹಿಳೆ). ವಾರ್ಡ್ ನಂ, 17-ಕಮಲಿಬಾಬಾ ದರ್ಗಾ ಏರಿಯಾ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 18-ಮಹೇಬೂಬ ಸುಭಾನಿ ದರ್ಗಾ ಏರಿಯಾ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 19-ಶಿವರಾಯ ಚೌಕಿ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 20-ಬಿಯಾಬಾನಿ ಏರಿಯಾ, ಪರಿಶಿಷ್ಟ ಜಾತಿ. ವಾರ್ಡ್ ನಂ, 21-ಹನುಮಾನ ನಗರ, ಪರಿಶಿಷ್ಟ ಜಾತಿ (ಮಹಿಳೆ). 22-ರೈಲ್ವೇ ಕಾಲೋನಿ, ಸಾಮಾನ್ಯ (ಮಹಿಳೆ). ವಾರ್ಡ್ ನಂ, 23-ವಿಜಯನಗರ ಮತ್ತು ಇಂದಿರಾ ನಗರ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ವೀಸಲು ನಿಗದಿಯಾಗಿದೆ. ಈ ಸಲ ಶೇ.50 ಪ್ರತಿಶತ ಮಹಿಳಾ ಮೀಸಲಾತಿ ನೀಡಿದೆ.
ಹಿಂದೆ 2017 ಏ. 9 ರಂದು ಸಾರ್ವತ್ರಿಕ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವ ಮೂಲಕ ಅದೇ ವರ್ಷ ನ.10 ರಂದು ಮೊದಲ ಅವದಿ 30 ತಿಂಗಳುಗಳಿಗೆ ಮೈನಾಬಾಯಿ ರಾಥೋಡ ಅವರು ಅಧ್ಯಕ್ಷರಾಗಿ, ತಿಮ್ಮಯ್ಯ ಪವಾರ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. 2020 ಮೇ 10 ರಂದು ಎರಡನೇ ಅವಧಿಗೆ ಜರಿನಾ ಬೇಗಂ ಅಧ್ಯಕ್ಷರಾಗಿ, ದೇವೇಂದ್ರ ಕರದಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸೆ.9 2022 ರಂದು 5 ವರ್ಷ ಪೂರೈಸಿದ ಬೆನ್ನಲ್ಲೆ ಚುನಾವಣೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದರು.
ಅಷ್ಟೊತ್ತಿಗೆ ಚುನಾವಣೆ ಘೋಷಣೆಯಾಗಿ ಡಿ.15ಕ್ಕೆ ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ ಹಾಗೂ ಡಿ.27ಕ್ಕೆ ಮತದಾನ ನಿಗದಿಯಾಗಿತ್ತು. ಆದರೆ ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ (ಬ)ಕ್ಕೆ ಮೀಸಲಾತಿ ನೀಡದೆ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದೆ ಎಂದು ಸ್ಥಳೀಯ ನಿವಾಸಿ ಅಲ್ತಾಫ್ ಸೌದಾಗರ್ ಎನ್ನುವವರು ಹೈಕೋರ್ಟಿಗೆ ತಕರಾರು ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗಲೇ, ಸರ್ಕಾರ ವಾಡಿ ಪುರಸಭೆಯ 23 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟ ಮಾಡಿ ಸಾರ್ವಜನಿಕ ಸಲಹೆ ಮತ್ತು ಆಕ್ಷೇಪಣೆಗೆ ವಾರದ ಅವಕಾಶ ನೀಡಿದ್ದರಿಂದ ಎಲ್ಲಾ ಪಕ್ಷದ ನಾಯಕರು ಏಕಾಏಕಿ ಕ್ರಿಯಾಶೀಲರಾಗಿದ್ದಾರೆ.