ಕಲಬುರಗಿ | ನಮ್ಮ ಕೆರೆಗಳನ್ನು ನಾವೇ ಸ್ವಚ್ಚವಾಗಿಡಬೇಕು : ದೇವಿಂದ್ರ ಬಡಿಗೇರ
ಕಲಬುರಗಿ : ಜಲಚರ ಪ್ರಾಣಿಗಳು ಬದುಕಲು ನೀರು ಬಹು ಮುಖ್ಯವಾಗಿದೆ. ಆದರೆ ಆ ನೀರು ಶುದ್ದವಾಗಿರಬೇಕು ಎಂಬುವುದು ಮರೆತ್ತಿದ್ದೆವೆ. ನಮ್ಮ ಸುತ್ತಮುತ್ತಲಿನ ಕೆರೆಗಳನ್ನ ನಾವೇ ಸ್ವಚ್ಚವಾಗಿಡಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ತಾಲೂಕ ಘಟಕದ ಮುಖಂಡ ದೇವಿಂದ್ರ ಬಡಿಗೇರ ತಿಳಿಸಿದರು.
ಜೇವರ್ಗಿ ಪಟ್ಟಣದ ಹೊರವಲಯದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಹತ್ತಿರವಿರುವ ಕೆರೆಯನ್ನು ಸ್ಥಳೀಯಾ ಯುವಕರು ಸ್ವಯಂ ಸೇವಕರಾಗಿ ಕೆರೆಯನ್ನ ಸ್ವಚ್ಚ ಮಾಡಿದರು.
ಕೆರೆ ಸ್ವಚ್ಚತೆಯನ್ನ ಮಾಡಿ ದೇವಿಂದ್ರ ಬಡಿಗೇರ ಮಾತನಾಡಿ, ನಮ್ಮ ಬದುಕಿಗೆ ಶುದ್ದ ನೀರು ಎಷ್ಟು ಮುಖ್ಯವೋ ಜಲಚರ ಪ್ರಾಣಿಗಳಿಗು ಅಷ್ಟೆ ಮುಖ್ಯ. ಕೆರೆಗೆ ಪ್ರತಿದಿನ ಅನೇಕರು ಬಂದು ಬಟ್ಟೆಗಳನ್ನ ಹಾಗೂ ಕೌದಿಗಳನ್ನ ತೋಳೆಯಲು ಬರುತ್ತಾರೆ. ನೀರಿನ ಅಭಾವದಿಂದ ಜನರು ಕೇರೆಗೆ ಬಂದು ತಮ್ಮ ಕೆಲಸವನ್ನು ಮುಗಿಸಿಕೊಂಡು ಹೋಗಬೇಕು, ಆದರೆ ಹಳೆಯ ಬಟ್ಟೆ ಹಾಗೂ ಕೌದಿಗಳನ್ನ ಕೆರೆಯಲ್ಲಿ ಹಾಕುತ್ತಿದ್ದಾರೆ. ಇದರಿಂದ ಕೆರೆಯ ನೀರು ಮಲಿನವಾಗುತ್ತಿದೆ, ವಾಯು ವಿಹಾರಕ್ಕೆ ಮೊದಲು ಅನೇಕ ಜನರು ಬರುತ್ತಿದ್ದರು. ಆದರೆ ಇಂದು ಈ ಹೊಲಸು ವಾಸನೆಯಿಂದ ಯಾರು ಕೂಡ ಬರುತ್ತಿಲ್ಲ. ವಿವಿಧ ಬಗೆಯ ಹಕ್ಕಿಗಳು ನೋಡುಗರ ಮನಸೆಳೆಯುತ್ತವೆ. ಸಂಜೆಯಾದರೆ ಅನೇಕರು ಬಂದು ಆನಂದ ಪಡುತ್ತಿದ್ದರು ಆದರೆ ಕೆಲವು ಪುಂಡು ಪೋಕರಿಗಳು ಕುಡಿತದ ಅಡ್ಡೆ ಮಾಡಿಕೊಂಡಿದ್ದಾರೆ ಎಂದರು.
ಇಂದು ನಾವು ಕೆರೆ ದಡದಲ್ಲಿರುವ ಬಟ್ಟೆ, ಕೌದಿ, ಪ್ಲಾಷ್ಟಿಕ್ ಸೇರಿದಂತೆ ಎಲ್ಲಾ ಕಸವನ್ನು ತೆಗೆದು ಹಾಕಿದ್ದೆವೆ. ಸಂಬಂದಪಟ್ಟ ಅಧಿಕಾರಿಗಳ ಕೆರೆ ಕಡೆ ಗಮನಹರಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂದರು.
ಕೆರೆ ವೀಕ್ಷಣೆ ಮಾಡಲು ಬಂದ ಅನೇಕರು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ತಾಲೂಕು ಘಟಕದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ನಿಂಬಾಳಕರ್, ಆಕಶ ಡುಗನಕರ್, ಆಂಜನೆಯ ವಾಡಿ, ಮರೆಪ್ಪ ಕೊಳಕೂರ, ಅಜಯ ಚೌವ್ಹಾಣ, ಸಂಜು ವಾಡಿ, ಓಂಕಾರ, ನಾಗರಾಜ ಕೊಳಕೂರ, ಸುಭಾಷ, ಶರಣು ಹಂಗರಿಗಿ ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದರು.