×
Ad

ಕಲಬುರಗಿ | ಹೊಟ್ಟೆ ನೋವು ನಿವಾರಕ ಔಷಧಿಯೊಂದು ತಿಳಿದು ಕುರಿ ಹೇನಿನ ಔಷಧಿ ಕುಡಿದು ಮಹಿಳೆ ಮೃತ್ಯು

Update: 2025-03-20 17:10 IST

ಸಾಂದರ್ಭಿಕ ಚಿತ್ರ

ಕಲಬುರಗಿ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕುರಿ ಹೇನಿನ ಔಷಧಿ ಕುಡಿದು ಮೃತಪಟ್ಟಿರುವ ಘಟನೆ ಹೊರವಲಯದ ಫರಹತಾಬಾದ್ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಫರಹತಾಬಾದ್ ನಿವಾಸಿ ಶಿವಮ್ಮ ಸಿದ್ದು ಎಂದು ಗುರುತಿಸಲಾಗಿದೆ.

ಶಿವಮ್ಮ ಅವರು ಕಳೆದ ಐದು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಮಾ.7ರ ರಾತ್ರಿ ತೀವ್ರ ಹೊಟ್ಟೆ ನೋವಿನಿಂದ ಹೊಟ್ಟೆ ನೋವು ನಿವಾರಕ ಔಷಧಿ ಎಂದುಕೊಂಡು ಕುರಿ ಹೇನಿನ ಔಷಧಿಯನ್ನು ಕುಡಿದಿದ್ದಾರೆ ಎನ್ನಲಾಗಿದೆ.

ಶಿವಮ್ಮರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News