×
Ad

ಕಲಬುರಗಿ | ʼಟ್ರಾನ್ಸ್‌ಫರ್ಮೆಶನ್ ಆಫ್ ಟೆಕ್ನಿಕಲ್ ಇನ್ನೋವೇಶನ್ ಟು ವಯಬೆಲ್ ಬಿಸಿನೆಸ್ʼ ಕುರಿತು ಕಾರ್ಯಗಾರ

Update: 2025-05-16 20:53 IST

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಐಟಿಎಸ್ ಇಲೆಕ್ಟ್ರಾನಿಕ್ಸ್, ಐಟಿ ಬಿಟಿ ಮತ್ತು ಎಸ್ ಅಂಡ್ ಟಿ , ಕರ್ನಾಟಕ ಸರ್ಕಾರ, ಐಐಐಟಿ ರಾಯಚೂರು, ಭಾರತ ಸರ್ಕಾರದ ಎಂ ಎಚ್ ಆರ್ ಡಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಅಡಿಯಲ್ಲಿ ವಿವಿಧ ಬ್ರ್ಯಾಂಚ್‌ಗಳ ಆಯ್ದ ಸುಮಾರು 350 ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾರ್ಯಾಗಾರ ಜರುಗಿತು.

ಟ್ರಾನ್ಸ್‌ಫರ್ಮೆಶನ್ ಆಫ್ ಟೆಕ್ನಿಕಲ್ ಇನ್ನೋವೇಶನ್ ಟು ವಯಬೆಲ್ ಬಿಸಿನೆಸ್ ಎನ್ನುವ ಕಾರ್ಯಗಾರದ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ನೆರವೇರಿಸಿದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಸಿಪಿಎಸಿ ಸದಸ್ಯರಾದ ಆಂಜನೇಯಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ರಾಜಾ ಭಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಾಗಾರವನ್ನು ನೆರವೇರಿಸಿಕೊಡಲು ಸಂಪನ್ಮೂಲ ವ್ಯಕ್ತಿಗಳಾಗಿ ಐಐಟಿ ಧಾರವಾಡ, ಐಐಐಟಿ ಧಾರವಾಡ, ಸಿಟೈ ಹುಬ್ಬಳ್ಳಿಯಿಂದ ಶ್ರೀರಾಮ್ ಸುಬ್ರಹ್ಮಣಿಯನ್, ಡಾ.ವಿನಾಯಕ ಹೊಸಮನಿ, ಪ್ರಶಾಂತ್ ಬಿಜಾಸ್ಪೂರ, ದಿವ್ಯಾ ಕುಲಕರ್ಣಿ, ಲೇಖಾ ಕೋನಾ ಆಗಮಿಸಿದ್ದರು.

ಇಡೀ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಪ್ರಾಚಾರ್ಯರಾದ ಡಾ.ಎಸ್.ಆರ್.ಪಾಟೀಲ್ ಹಾಗೂ ಉಪ ಪ್ರಾಚಾರ್ಯರಾದ ಡಾ.ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ಡಾ.ಎಚ್ ನಾಗೇಂದ್ರ ವಹಿಸಿದ್ದರು. ಕಾರ್ಯಗಾರದ ಬಗ್ಗೆ ಪ್ರೊ.ಸಿದ್ಧರಾಮ ಸಂಗೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಸರಾಫ್ ಕಾರ್ಯಕ್ರಮ ನಿರೂಪಿಸಿದರು, ಡಾ ನಾಗೇಶ್ ಸಾಲಿಮಠ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News