×
Ad

ಕಲಬುರಗಿ | ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪನ : ರಿಕ್ಟರ್‌ ಮಾಪಕದಲ್ಲಿ 2.0 ತೀವ್ರತೆ ದಾಖಲು

Update: 2025-11-14 22:26 IST

ಸಾಂದರ್ಭಿಕ ಚಿತ್ರ (PTI)

ಕಲಬುರಗಿ: ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ತಿಳಿಸಿದೆ.

ಕಲಬುರಗಿ ತಾಲೂಕಿನ ಕಲ್ಲಹಂಗರ್ಗಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಷ್ಟಗಾ ಗ್ರಾಮದ ವ್ಯಾಪ್ತಿಯಲ್ಲಿ ಭೂ ಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 2.0 ತೀವ್ರತೆ ದಾಖಲಾಗಿದೆ.  

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪನವಾಗಿದೆ. ಕಲಬುರಗಿ ನಗರದಿಂದ ಸುಮಾರು 12 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ ಎಂದು KSNDMC ಮಾಹಿತಿ ನೀಡಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News