×
Ad

ಆಳಂದ | ಸಿಯುಕೆಯಲ್ಲಿ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರ್ ಉದ್ಘಾಟನೆ

Update: 2025-09-12 21:22 IST

ಕಲಬುರಗಿ: "ದುರ್ಯೋಧನನಂತೆ ಅಲ್ಲ, ಧರ್ಮರಾಜನಂತೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ" ಎಂದು ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ 'ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಸೆಂಟರ್' ಮತ್ತು ಮೊದಲ ಸಾಫ್ಟ್ ಸ್ಕಿಲ್ಸ್ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದರು.

"ವ್ಯಕ್ತಿಯ ವ್ಯಕ್ತಿತ್ವವು ಆತನ ಮೃದು ಕೌಶಲ್ಯದ (ಸಾಫ್ಟ್ ಸ್ಕಿಲ್ಸ್) ಮೂಲಕ ಪ್ರತಿಫಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಮಗ್ರ ವ್ಯಕ್ತಿತ್ವವನ್ನು ಹೊಂದಲು ಪರಿಣಾಮಕಾರಿ ಸಂವಹನ, ಪರಸ್ಪರ ಕೌಶಲ್ಯಗಳು, ತಂಡದಲ್ಲಿ ಕೆಲಸಮಾಡುವ ಮನೋಭಾವ, ಪರಿಣಾಮಕಾರಿ ನಾಯಕತ್ವ, ಸಮಯ ನಿರ್ವಹಣೆ, ಸಕಾರಾತ್ಮಕ ಮನೋಭಾವ, ಸೃಜನಶೀಲತೆ, ಹೊಂದಿಕೊಳ್ಳುವಿಕೆ, ಸಹಾನುಭೂತಿ ಮುಂತಾದ ಮೃದು ಕೌಶಲ್ಯಗಳನ್ನು ಹೊಂದಿರಬೇಕು. ಅಂತಹ ಕೌಶಲ್ಯಗಳನ್ನು ಒದಗಿಸಲು ನಾವು ಈ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಕೇಂದ್ರದ ಮೂಲಕ ನಡೆಯುವ ಮೃದು ಕೌಶಲ್ಯದ ಕಾರ್ಯಕ್ರಮಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.

ಅತಿಥಿ ಪ್ರೊ. ಭೀಮರಾವ್ ಭೋಸ್ಲೆ, ಬಿಸಿನೆಸ್ ಸ್ಟಡೀಸ್ ನಿಕಾಯದ ಡೀನ್ ಪ್ರೊ. ಪಾಂಡುರಂಗ ಪತ್ತಿ, ಸಿಯುಕೆಯ ಸಾಫ್ಟ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ನಿರ್ದೇಶಕಿ ಡಾ.ಸುಷ್ಮಾ ಎಚ್. ಅವರು ಮಾತನಾಡಿದರು.

ಡಾ.ಸಫಿಯಾ ಪರ್ವೀನ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಕವಿತಾ ಸಂಗೋಳಗಿ ವಂದಿಸಿದರು.

ಈ ಸಂದರ್ಭದಲ್ಲಿ ಡಾ.ಮುಹಮ್ಮದ್ ಜೋಹೈರ್, ಡಾ.ಗಣಪತಿ ಬಿ ಸಿನ್ನೂರ್, ಪ್ರೊ.ಕೆ.ಪದ್ಮಶ್ರೀ, ಡಾ.ನವೀನ, ಡಾ.ಜಗದೀಶ, ಡಾ.ಶಿವ, ಡಾ.ಶ್ರೀಲಕ್ಷ್ಮಿ, ಡಾ.ಜೈಪಾಲ, ಡಾ.ವಾಣಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News