×
Ad

ಮನ್ ಕೀ ಬಾತ್‌ನಲ್ಲಿ ʼಕಲಬುರಗಿ ಖಡಕ್ ರೊಟ್ಟಿʼ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

Update: 2025-06-29 14:26 IST

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂ.29) ʼಮನ್ ಕೀ ಬಾತ್ʼ ಕಾರ್ಯಕ್ರಮದಲ್ಲಿ ಕಲಬುರಗಿಯ ಖಡಕ್ ರೊಟ್ಟಿ ತಯಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

'ಕಲಬುರಗಿಯ ಖಡಕ್ ರೊಟ್ಟಿ' ಬಗ್ಗೆ ಮೋದಿ ಮಾತಾನಾಡಿದ್ದೇನು?

ಕರ್ನಾಟಕದ ಕಲಬುರಗಿ ಜಿಲ್ಲೆಯ ಮಹಿಳೆಯರು ಕೂಡಿಕೊಂಡು ಸ್ವಸಹಾಯ ಸಂಘದ ಮೂಲಕ ಜೋಳದ ರೊಟ್ಟಿ ಉತ್ಪಾದಿಸಿ, ರೊಟ್ಟಿಯನ್ನು ಬ್ರ್ಯಾಂಡ್ ಆಗಿ ಮಾಡಿದ್ದಾರೆ. ಕಟ್ಟಿಕೊಂಡ ಸ್ವಸಹಾಯ ಸಂಘದಲ್ಲಿ ದಿನಕ್ಕೆ 3 ಸಾವಿರಕ್ಕೂ ಹೆಚ್ಚಿನ ರೊಟ್ಟಿಗಳನ್ನು ತಯಾರಿಸುತ್ತಾರೆ. ಈ ರೊಟ್ಟಿಯು ಕೇವಲ ಆ ಪ್ರದೇಶಕ್ಕೆ ಸೀಮಿತವಾಗದೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೌಂಟರ್ ಕೂಡ ತೆಗೆಯಲಾಗಿದೆ. ಕಲಬುರಗಿಯ ರೊಟ್ಟಿ ಈಗ ಅನ್ ಲೈನ್ ನಲ್ಲೂ ಆರ್ಡರ್ ಬರುತ್ತಿವೆ. ಇದರಿಂದ ಮಹಿಳೆಯರ ಆದಾಯ ಕೂಡ ಹೆಚ್ಚುತ್ತಿದೆ ಎಂದು ಪ್ರಧಾನಿ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯ ಇದೇ ಖಡಕ್ ಜೋಳದ ರೊಟ್ಟಿಯ ಬಗ್ಗೆ ಕಳೆದ ವರ್ಷ 2024 ರ ಅಕ್ಟೋಬರ್ ನ 28ರಂದು 'ವಾರ್ತಾ ಭಾರತಿ' ಪತ್ರಿಕೆಲ್ಲಿ ವಿಶೇಷ ಲೇಖನ ಪ್ರಕಟವಾಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News