Kalaburgi | ಸಚಿವ ಪ್ರಿಯಾಂಕ್ ಖರ್ಗೆಗೆ ಮರುಳಾರಾಧ್ಯ ಸ್ವಾಮೀಜಿ ಏಕವಚನದಲ್ಲಿ ವಾಗ್ದಾಳಿ
ಕಲಬುರಗಿ: ಕಲಬುರಗಿಯಲ್ಲಿ ಕಬ್ಬಿನ ಬೆಲೆ ನಿಗದಿ ಮಾಡುವ ವಿಚಾರಕ್ಕೆ ಇಲ್ಲಿವರೆಗೆ ಒಂದೇ ಒಂದು ಸಭೆ ಮಾಡಿಲ್ಲಂದ್ರ ಏನರ್ಥ? ಸಭೆ ಮಾಡೋಕೆ ನಿನಗೇನು ಕು.. ಡ್ಯಾಗ್ ಧಮ್ ಇಲ್ಲೇನು?" ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಶ್ಯಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅಫ್ಝಲ್ ಪುರ ತಾಲೂಕಿನ ಚೌಡಾಪುರದಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ವಾಮಿಜಿ, ಹಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈವರೆಗೆ ಒಂದೇ ಒಂದು ಸಭೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ, ಶಾಸಕರ ಹೆಸರು ಹೇಳ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೇನು ಉಂಡು ಮಲಗೋಕೆ ಇದ್ದಾರಾ? ಎಂದು ಲೇವಡಿ ಮಾಡಿದ್ದಾರೆ.
''ಕಲಬುರಗಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೀವಾ ಇದ್ದೀರಿ.. ಅದರಲ್ಲೂ ರಾಜ್ಯದ ಹೋಂ ಮಿನಿಸ್ಟರ್ ಬೇರೆ ಇದ್ದೀರಿ. ಆದರೆ ಕಬ್ಬು ಬೆಲೆ ನಿಗದಿ ಸಂಬಂಧ ಇಲ್ಲಿವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಮೀಟಿಂಗ್ ನಡೆಸಿಲ್ಲ ನಿನ್ನ ಕು.. ಡ್ಯಾಗ ಧಮ್ ಇಲ್ಲೇನು?'' ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ.
ದೊಡ್ಡ ಸ್ಥಾನದಲ್ಲಿ ರೈತರಿಗೆ ಜನಕ ಉಪಯೋಗ ಆಗುವಂತಹ ಕೆಲಸ ಮಾಡೋದುಬಿಟ್ಟು ದಿನ ಬೆಳಗಾದರೆ ಅವರಿಗೆ ಬೈಯೋದು, ಇವರಿಗೆ ಬೈಯೋದು ಮಾಡ್ಕೊಂತ ಕುಂತೀರಿ. ಆದ್ರೆ ರೈತರ ವಿಚಾರಕ್ಕೆ ಬಂದಾಗ ಧಮ್ ತೋರಿಸಬೇಕು, ಬೆಲೆ ನಿಗದಿಗೆ ಮೀಟಿಂಗ್ ಮಾಡಬೇಕು ಅದುಬಿಟ್ಟು ಕೆಲಸಕ್ಕೆ ಬಾರದ ಮಾತುಗಳು ಆಡ್ಕೋಂತ ಕುಂತೀರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.