ಅಫಜಲಪುರ: ಜಗತ್ತಿನ ಬಹುತೇಕ ಕ್ರಾಂತಿಗಳು ಖಡ್ಗಯುದ್ಧ ಹಾಗೂ ರಕ್ತಪಾತದ ಮೂಲಕ ನಡೆದಿವೆ. ಆದರೆ ಬಸವಾದಿ ಶರಣರು ಖಡ್ಗವಿಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದವರು. ವಚನ ಚಳವಳಿಯು ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಇಂದಿಗೂ ಪ್ರಸ್ತುತವಾಗಿದೆ ಎಂದು ಪ್ರೊ. ಬಾಪುಗೌಡ ಬಿರಾದಾರ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ, ಭಾರತೀಯ ಬಸವ ಬಳಗ ಹಾಗೂ ಬಸವ ಮಾರ್ಗ ಪ್ರತಿಷ್ಠಾನ ಅಫಜಲಪುರ ವತಿಯಿಂದ ಆಯೋಜಿಸಿದ್ದ ಶರಣ ಸಂಗಮ ಹಾಗೂ ಲಿಂ. ಡಾ. ಸಿ.ವಿ. ಟಕ್ಕಳಕಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅನುಭಾವ ನೀಡುತ್ತ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶರಣೆ ದಾಕ್ಷಾಯಣಿ ಗುರುಲಿಂಗಪ್ಪ ಉಪಾಸೆ ಅವರು ಡಾ. ಸಿ.ವಿ. ಟಕ್ಕಳಕಿ ಅವರ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯನ್ನು ಸ್ಮರಿಸಿದರು.

ಡಾ. ಸಿ.ವಿ. ಟಕ್ಕಳಕಿ ಅವರು ದಣಿವರಿಯದ ಕಾಯಕಜೀವಿಯಾಗಿದ್ದರು. ನಿರಂತರವಾಗಿ ರೋಗಿಗಳ ಶುಶ್ರೂಷೆ ಹಾಗೂ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸೇವೆ ಮಾಡುವುದು ದೇವರು ತಮಗೆ ನೀಡಿರುವ ವರ, ಜನರ ಸೇವೆಯೇ ದೇವರ ಸೇವೆ ಎಂದು ಭಾವಿಸಿದ್ದರು ಎಂದು ನೆನಪಿಸಿಕೊಂಡರು.

ಶರಣ ಶಂಕರರಾವ್ ಹುಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಮಕಬೂಲ್ ಪಟೇಲ್, ಸದಾಶಿವ ಮೇತ್ರಿ, ಅಶೋಕ ತಳವಾಡೆ ಹಾಗೂ ಶರಣಪ್ಪ ಹಲಸೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ. ಸಂಗಮೇಶ ಟಕ್ಕಳಕಿ, ಪೂಜಾ ಟಕ್ಕಳಕಿ, ರಾಘವೇಂದ್ರ ಕಲಶೆಟ್ಟಿ, ಶಿವಶರಣಪ್ಪ ಲಾವಣಿ, ಬಸಣ್ಣ ಗುಣಾರಿ, ಅಬ್ಬಾಸಲಿ ನದಾಫ್, ಶ್ರೀಶೈಲ ಮೇತ್ರಿ, ಗೋಪಾಲ್ ಹಳ್ಯಾಳ, ಶಾಂತಪ್ಪ ಅಂಜುಟಗಿ, ಶರಣಪ್ಪ ಮೇತ್ರಿ, ಪ್ರಭಾವತಿ ಮೇತ್ರಿ, ಬಸವಣ್ಣಪ್ಪ ಉಪ್ಪಾರ, ಚಂದ್ರಶೇಖರ್ ಕೆಂಗನಾಳ, ಸುನಂದಾ ಪಾಟೀಲ, ಸಿದ್ಧನಗೌಡ ಮಾಲಿಪಾಟೀಲ ಸೇರಿದಂತೆ ಶರಣ ಅನುಯಾಯಿಗಳು, ಡಾ. ಸಿ.ವಿ. ಟಕ್ಕಳಕಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಶಿಕ್ಷಕ ರವಿಚಂದ್ರ ಅತನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರುಘೇಂದ್ರ ಮಸಳಿ ಸ್ವಾಗತಿಸಿದರು. ಮೃತ್ಯುಂಜಯ ಕಳ್ಳಿಮಠ ಹಾಗೂ ಚಿದಾನಂದ ಗವಾಯಿಗಳು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರೋಹಿಣಿ ಮಂಜುನಾಥ ಕಲಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ನಾಗೇಂದ್ರ ನಾಗಬಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor