×
Ad

ಡಾ.ಅಂಬೇಡ್ಕರ್ ಜಯಂತಿ ಕರಪತ್ರ ಬಿಡುಗಡೆಗೊಳಿಸಿದ ಸಚಿವ ಶರಣಪ್ರಕಾಶ್‌ ಪಾಟೀಲ್

Update: 2025-04-15 21:23 IST

ಕಲಬುರಗಿ : ಸೇಡಂ ಪಟ್ಟಣದಲ್ಲಿ ಎ.23 ರಂದು ಸ್ವಾಭಿಮಾನ ಸರ್ವ ಧರ್ಮ ಸಮನ್ವಯ ಸಮಿತಿ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯ ಕರಪತ್ರಗಳನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಆರ್.ಪಾಟೀಲ್ ಉಡಗಿ ಅವರು ಅಂಬೇಡ್ಕರ್ ಪುತ್ಥಳಿ ಅವರಣದಲ್ಲಿ ಬಿಡುಗಡೆಗೊಳಿಸಿದರು.

ಈ ವೇಳೆ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಅನ್ನರ, ಜೈಬೀಮ್ ಉಡಗಿ, ಮಾರುತಿ ಕೋಡಂಗಲಕರ್, ಜಗನ್ನಾಥ ಚಿಂತ್ಪಳಿ, ಹಾಜಿ ನಾಡೆಪಲ್ಲಿ, ರೇವಣಸಿದ್ದಪ್ಪ ಸಿಂದೆ, ರವಿ ನಾಯಕ, ಸುನೀಲ್ ಹಳ್ಳಿ, ಕಾಶಿನಾಥ್ ನಾಟೀಕರ್, ಎಂ.ಡಿ ಗೌಸ್, ಗೌತಮ್ ಹೇಳಿ, ಈಶ್ವರಾಜ ಮಾದವಾರ, ಸಾಗರ ಕಲಕಂಭ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News