×
Ad

ಬಿಜೆಪಿ ಸರಕಾರದ ಅಕ್ರಮದ ಬಗ್ಗೆ ಯತ್ನಾಳ್ ಹೇಳಿಕೆ ತನಿಖೆಗೆ ಶಕ್ತಿ ತುಂಬಿದೆ: ಗೃಹ ಸಚಿವ ಡಾ.ಪರಮೇಶ್ವರ್

Update: 2023-12-27 15:00 IST

ಕಲಬುರಗಿ, ಡಿ.27: ಬಿಜೆಪಿ ಸರಕಾರದಲ್ಲಿ ಅಕ್ರಮ ನಡೆದಿರುವುದು 4 ಸಾವಿರ ಕೋಟಿ ರೂ. ಅಂತ ನಮಗೆ ತಪ್ಪು ಕಲ್ಪನೆ ಇತ್ತು. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ಕೊರೋನ ಹಗರಣದ ನಿಖರ ಮೊತ್ತ ಗೊತ್ತಾಗಿದೆ. 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಯತ್ನಾಳ ಹೇಳಿಕೆ ತನಿಖೆಗೆ ಇನ್ನಷ್ಟು ಶಕ್ತಿ ಕೊಟ್ಟಂತಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ ನಮ್ಮ ಕೆಲಸವನ್ನು ಹಗುರಾಗಿ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಸಂಸದ ಪ್ರತಾಪ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಸಂಸದ ಪ್ರತಾಪ ಸಿಂಹ ಮಾತನಾಡುವಾಗ ಎಚ್ಚರಿಕೆ ಮತ್ತು ಸೂಕ್ಷ್ಮವಾಗಿ ಮಾತನಾಡಬೇಕು ಲಕ್ಷಾಂತರ ಜನ ನಮ್ಮ ನೋಡುತ್ತಾರೆ ಅದನ್ನು ತಿಳಿದುಕೊಂಡು ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಜಗದೇವ್ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News