×
Ad

ಕಲಬುರಗಿ: ರೌಡಿ ಶೀಟರ್ ನ ಬರ್ಬರ ಕೊಲೆ

Update: 2024-11-12 11:23 IST

ಕಲಬುರಗಿ: ರೌಡಿಶೀಟರ್ ಒಬ್ಬನನ್ನು ಹತ್ಯೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ನಡೆದಿದೆ.

ಪಟ್ಟಣ ಗ್ರಾಮದ ಸೋಮು ತಾಳಿಕೋಟಿ(40) ಕೊಲೆಯಾಗಿರುವ ರೌಡಿ ಶೀಟರ್. ಈತನನ್ನು ಕೊಲೆಗೈದಿರುವ ದುಷ್ಕರ್ಮಿಗಳು ಆಳಂದ ರಸ್ತೆಯ ರೈಲ್ವೆ ಹಳಿ ಸಮೀಪ ಮೃತದೇಹವನ್ನು ಬಿಸಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮು ತಾಳಿಕೋಟಿ ಕೆಲವು ತಿಂಗಳ ಹಿಂದೆ ಪಟ್ಟಣ ಗ್ರಾಮದ ಡಾಬಾ ಮಾಲಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಆ ವೇಳೆ ಡಾಬಾ ಮಾಲಕನ ಮೇಲೆ ಸೋಮು ಮತ್ತು ತಂಡ ಹಲ್ಲೆ ಮಾಡಿತ್ತು. ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಸೋಮುವನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News