ಕಲಬುರಗಿ-ಮೈಸೂರು, ಕಲಬುರಗಿ-ಚಿತ್ರದುರ್ಗ ಮಾರ್ಗಗಳಲ್ಲಿ ನಾನ್ ಎ.ಸಿ. ಸ್ಲೀಪರ್ ಬಸ್‍ಗಳ ಕಾರ್ಯಾಚರಣೆ
ಕಲಬುರಗಿ: ಪ್ರಯಾಣಿಕರ ಬೇಡಿಕೆ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 (ಕಲಬುರಗಿ ಘಟಕ-1) ವತಿಯಿಂದ ಕಲಬುರಗಿ-ಮೈಸೂರು-ಕಲಬುರಗಿ ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ (ಅಮೋಘವರ್ಷ) ಸಾರಿಗೆ ಹಾಗೂ ಕಲಬುರಗಿ-ಚಿತ್ರದುರ್ಗ-ಕಲಬುರಗಿ ಮಾರ್ಗದಲ್ಲಿ ನಾನ್ ಎ.ಸಿ. ಸ್ಲೀಪರ್ ಸಾರಿಗೆಯನ್ನು ಈಗಾಗಲೇ ಡಿ.29 ರಿಂದ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ನಿಗಮದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ-ಮೈಸೂರು ನಾನ್ ಎ.ಸಿ. ಸ್ಲೀಪರ್ (ಅಮೋಘವರ್ಷ) ಸಾರಿಗೆಯು ಸಂಜೆ 5 ಗಂಟೆಗೆ ಕಲಬುರಗಿಯಿಂದ ಬಸ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 7 ಗಂಟೆಗೆ ಮೈಸೂರಿಗೆ ತಲುಪಲಿದೆ. ಅದೇ ರೀತಿ ಮೈಸೂರು ಬಸ್ ನಿಲ್ದಾಣದಿಂದ ಸಂಜೆ 5.30 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 7.30 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಈ ಬಸ್ ವ್ಹಾಯಾ: ಜೇವರ್ಗಿ, ಶಹಾಪೂರ, ಲಿಂಗಸೂರ, ಸಿಂಧನೂರ, ಬಳ್ಳಾರಿ, ಚಳ್ಳಿಕೇರೆ, ಹಿರಿಯೂರ, ನಾಗಮಂಗಲ ಮತ್ತು ಪಾಂಡವಪುರ ಮಾರ್ಗವಾಗಿ ಸಂಚರಿಸಲಿದೆ.
ಕಲಬುರಗಿ-ಚಿತ್ರದುರ್ಗ ನಾನ್ ಎ.ಸಿ. ಸ್ಲೀಪರ್ ಸಾರಿಗೆಯು ರಾತ್ರಿ 10.45 ಗಂಟೆಗೆ ಕಲಬುರಗಿ ಬಸ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಚಿತ್ರದುರ್ಗಕ್ಕೆ ತಲುಪಿದೆ. ಅದೇ ರೀತಿ ಚಿತ್ರದುರ್ಗ ಬಸ್‍ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.20 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಈ ಬಸ್ಸು ವ್ಹಾಯಾ: ಜೇವರ್ಗಿ, ಶಹಾಪೂರ, ಲಿಂಗಸೂರ, ಸಿಂದನೂರ, ಗಂಗಾವತಿ ಮತ್ತು ಹೊಸಪೇಟ ಮಾರ್ಗವಾಗಿ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.