ಸಚಿನ್ ಆತ್ಮಹತ್ಯೆ ಪ್ರಕರಣ: ರಾಜು ಕಪನೂರ್ ಸೇರಿ 5 ಮಂದಿ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
Update: 2025-01-18 14:40 IST
ರಾಜು ಕಪನೂರ್
ಬೀದರ್ : ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಸಿಐಡಿ ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಟ್ಟಿದ್ದ ರಾಜು ಕಪನೂರ್ ಸೇರಿ 5 ಜನ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂದು ಸಿಐಡಿ ಅಧಿಕಾರಿಗಳು ವಿಚಾರಣೆಯನ್ನು ಮುಗಿದಿದೆ ಎಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಹಾಗಾಗಿ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬೀದರ್ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂದು ಸಿಐಡಿ ವಿಚಾರಣೆ ಮುಗಿದ ಹಿನ್ನೆಲೆ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯದಲ್ಲಿ ಇವತ್ತು ಯಾವುದೇ ವಾದ ಪ್ರತಿವಾದ ಆಗಲಿಲ್ಲ. ಸಿಐಡಿ ಅಧಿಕಾರಿಗಳು ಅವರನ್ನು ಕಷ್ಟಡಿಗೆ ಕೇಳದೆ, ವಿಚಾರಣೆ ಮುಗಿದಿದೆ ಎಂದು ನ್ಯಾಯಾಲಯಕ್ಕೆ ಒಪ್ಪಿಸಿದೆ. ಹಾಗಾಗಿ ನಾವು ಇವತ್ತೇ ಜಾಮೀನುಗೋಸ್ಕರ ಅರ್ಜಿ ಹಾಕುತ್ತೇವೆ ಎಂದು ಆರೋಪಿ ಪರ ವಕೀಲರು ಮಾಹಿತಿ ನೀಡಿದ್ದಾರೆ.