ಕಲ್ಯಾಣ ಕರ್ನಾಟಕದಲ್ಲಿ ಬಸವಾದಿ ಶರಣರ ವಿಚಾರ ಬಿತ್ತಿದವರಲ್ಲಿ ಸತ್ಯಂಪೇಟೆಯವರು ಮುಖ್ಯರು: ಆನೇಗುಂದಿ
ಕಲಬುರಗಿ: ಕಲ್ಯಾಣ ಕರ್ನಾಟಕದ ಈ ನೆಲದಲ್ಲಿ ಬಸವಾದಿ ಶರಣರ ವಿಚಾರಗಳನ್ನು ಬಿತ್ತಿದವರಲ್ಲಿ ಲಿಂಗಣ್ಣ ಸತ್ಯಂಪೇಟೆಯವರು ಬಹು ಮುಖ್ಯರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಸಿದ್ಧಲಿಂಗಣ್ಣ ಆನೇಗುಂದಿಯವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಚರಬಸವೇಶ್ವರ ಪದವಿ ಪೂರ್ವ ಮಹಿಳಾ ಕಾಲೇಜು ಶಹಾಪುರದಲ್ಲಿ ಇಂದು ನಡೆದ ಯಾದಗಿರಿ ಜಿಲ್ಲೆಯ ಚಕೋರ ವಿಚಾರ ವೇದಿಕೆ ಅಡಿಯಲ್ಲಿ ನಡೆದ "ಲಿಂಗಣ್ಣ ಸತ್ಯಂಪೇಟೆ ಬದುಕು ಬರಹ ಹೋರಾಟ ಪತ್ರಿಕೋದ್ಯಮ" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ಇಂತಹ ಸಾಧಕರ ಬದುಕು ಬರಹ ಅರಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಧರ್ಮಣ್ಣಗೌಡ ಬಿರಾದಾರ ವಹಿಸಿದ್ದರು. ಆರಂಭದಲ್ಲಿ ಸತ್ಯಂಪೇಟೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಧರ್ಮಣ್ಣಗೌಡ ಬಿರಾದಾರ ಚಾಲನೆ ನೀಡಿದರು.
ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್, ಹಿರಿಯ ಕವಿ ಹಾಗೂ ಲಿಂಗಣ್ಣ ಸತ್ಯಂಪೇಟೆ, ಹಿರಿಯ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಣ್ಣಗೌಡ ಬಿರಾದಾರ ಅವರು ತಮ್ಮ ಹಾಗೂ ಸತ್ಯಂಪೇಟೆಯವರ ಕುಟುಂಬದವರ ಒಡನಾಟ ತಿಳಿಸಿ ಅಂತಹ ಹೋರಾಟದ ವ್ಯಕ್ತಿ ಇಲ್ಲವಾದಾಗ ತಾವು ಕಣ್ಣೀರು ಸುರಿಸಿದ ಸಂದರ್ಭ ವಿವರಿಸಿದರು. ಇಂತಹ ವ್ಯಕ್ತಿಯ ಪರಿಚಯ ಮಾಡುವ ಈ ವಿಶೇಷ ಉಪನ್ಯಾಸ ಕಾರ್ಯಕ್ರಮ ತಮ್ಮ ಕಾಲೇಜಿನಲ್ಲಿ ಮಾಡಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳು ತಿಳಿಸಿದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ನಿರ್ಮಲ ತುಂಬಗಿ ಅವರು ಅರ್ಥಪೂರ್ಣವಾಗಿ ನಿರ್ವಹಿಸಿ ಅವರು ಕೂಡಾ ಸತ್ಯಂಪೇಟೆ ಅವರ ಬಗೆಗಿನ ತಮ್ಮ ಹಲವಾರು ಅನಿಸಿಕೆಗಳನ್ನು ಹಂಚಿಕೊಂಡರು. ನೂರಾರು ವಿದ್ಯಾರ್ಥಿನಿಯರು, ಉಪನ್ಯಾಸಕರು ಭಾಗವಹಿಸಿದರು. ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ವಂದನೆಗಳನ್ನು ತಿಳಿಸಿದರು.