×
Ad

ಕಲಬುರಗಿ | ಸಾಧಕರಿಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ

Update: 2026-01-25 20:24 IST

ಕಲಬುರಗಿ : ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದ ಅವರ 163ನೇ ಜಯಂತಿ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ನಗರದ ಕನ್ನಡ ಭವನದಲ್ಲಿ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯುವ ಸಾಧಕರಾದ ಸಂಗೀತ ಎಂ ಪಡಶೆಟ್ಟಿ, ಅಕ್ಷಯ್ ಯಂಕಪ್ಪ ಡ್ಯಾನ್ಸರ್, ವಿಜಯಕುಮಾರ, ಶ್ರೇಯ ಪಾಟೀಲ್, ಅನನ್ಯ, ಡಿ.ಎಸ್.ಪ್ರಜ್ವಲ್ ಅವರಿಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಮುಖಂಡ ನೀಲಕಂಠಾವ್ ಮೂಲಗೆ, ಸುರೇಶ್ ಮಾಲಿಕ್, ಮನ್ನೂರ್ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರೂಕ್ ಮನ್ನೂರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಚಿನ್ ಪರತಾಹಬಾದ, ಡಾ. ರಾಜಶೇಖರ್ ಮಾಂಗ್, ಮಹಮದ್ ಇಬ್ರಾಹಿಂ ಕಪನೂರ್, ವಿಜಯಕುಮಾರ ಕಟ್ಟಿಮನಿ, ಜೈ ಭೀಮ ಹುಡುಗಿ, ಗಿರೀಶ ಬೋರೆ, ಕಲ್ಯಾಣರಾವ ತೋನಸಳ್ಳಿ, ಮಂಜುನಾಥ್ ನಾಲವಾರಕರ್, ಸತೀಶ್ ಫರಹತಾಬಾದ, ಸುರೇಶ ಹನಗುಡಿ, ಅಣವೀರ ಪಾಟೀಲ, ಅಕ್ಷಯ್, ಗುಂಡು ಸಿಂಗ್, ಶಿವು ಯಾದವ, ಅಂಕುಶ್ ಬಿಲ್ಲವ್, ಶ್ರೀಮಂತ ಚೌದರಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News