ಸೇಡಂ | ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವ : ಭವ್ಯ ಮೆರವಣಿಗೆ
ಕಲಬುರಗಿ : ಸೇಡಂ ಪಟ್ಟಣದಲ್ಲಿ ಛಲವಾದಿ ಸಮಾಜದ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಆಚರಣೆ ಪ್ರಯುಕ್ತ ಶ್ರೀ ಕೋತ್ತಲ ಬಸವೇಶ್ವರ ದೇವಾಲಯದಿಂದ ಚೌರಸ್ತಾ, ಕಿರಣಾ ಬಜಾರ್ ಮಾರ್ಗವಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅವರಣದವರೆಗೆ ಸಾರೋಟಿನಲ್ಲಿ ಭವ್ಯ ಮೆರವಣಿಗೆ ಜರುಗಿತು.
ಈ ಭವ್ಯ ಮೆರವಣಿಗೆಯಲ್ಲಿ ಡೌಳು ಕುಣಿತ ಹಾಗೂ ತಮಟೆ ಮೂಲಕ ಮಹಿಳೆಯರು ಕುಣಿತ ಜನರ ಗಮನ ಸೆಳೆಯಿತು.
ಬಸವೇಶ್ವರ ವೃತ್ತದಿಂದ ಬೆಳಗ್ಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣದ ವರೆಗೆ ಕಾರ್, ಆಟೋ ಹಾಗೂ ಬೈಕ್ ರ್‍ಯಾಲಿಯೂ ಕೂಡ ಅದ್ದೂರಿಯಾಗಿ ಜರುಗಿತು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅವರಣದಲ್ಲಿ ಶನಿವಾರ ಸಂಜೆ ಭೀಮಾ ಘರ್ಜನೆ ಸಮಾವೇಶ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ್ ಆರ್ ಪಾಟೀಲ್ ಉಡಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು ಆಗಮಿಸಿ ಚಾಲನೆ ನೀಡಲಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅಂಬೇಡ್ಕರ್ ಪುತ್ಥಳಿ ಪುಷ್ಪಾರ್ಚನೆ ಮಾಡುವರು, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ, ಶ್ರೀಶೈಲ್ ಎಮ್. ಬಟಗೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ನಿಖಿತರಾಜ ಮೌರ್ಯ ಮುಖ್ಯ ಭಾಷಣಕಾರರಾಗಿ ಆಗಮಿಸುವರು, ಪುರಸಭೆ ಅಧ್ಯಕ್ಷ ವಿರೇಂದ್ರ ರುದ್ನೂರ, ಉಪಾಧ್ಯಕ್ಷೆ ಸೈಜಾದಬಿ ಇಬ್ರಾಹಿಂ ನಾಡೆಪಲಿ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ್ ಕಪನೂರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.