×
Ad

ಸೇಡಂ | ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Update: 2025-03-25 18:16 IST

ಕಲಬುರಗಿ : ಸೇಡಂ ಪುರಸಭೆ ವತಿಯಿಂದ 2024-25ನೇ ಸಾಲಿಗೆ ಸ್ವಚ್ಚ ಭಾರತ ಮಿಷನ್ 2.0 ಯೋಜನೆಯಡಿ ವೈಯಕ್ತಿಕ ಶೌಚಾಲಯ ರಹಿತರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪುರಸಭೆಯಿಂದ ಪ್ರತಿ ಶೌಚಾಲಯಕ್ಕೆ 30,000 ರೂ.ಗಳ ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಇಚ್ಛೆಯುಳ್ಳ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸೇಡಂ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಇಚ್ಛೆಯುಳ್ಳ ಸಾರ್ವಜನಿಕರು ಅವಶ್ಯಕ ದಾಖಲೆಗಳಾದ ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಆದಾಯ ಪ್ರಮಾಣಪತ್ರ, ಮನೆಯ ದಾಖಲಾತಿ, ಖಾಲಿ ಜಾಗದ ಫೋಟೋ, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಪ್ರತಿ ಹಾಗೂ ಪಾಸ್‍ಪೋಟ್ ಸೈಜಿನ ಭಾವಚಿತ್ರಗಳೊಂದಿಗೆ 2025ರ ಏ.12 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸೇಡಂ ಪುರಸಭೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News