×
Ad

ಸೇಡಂ | ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ

Update: 2025-09-05 18:43 IST

ಕಲಬುರಗಿ: ಮುಹಮ್ಮದ್ ಪೈಗಂಬರ್ ಅವರ 1500 ವರ್ಷದ ಜನ್ಮದಿನ ಅಂಗವಾಗಿ ಹಮ್ಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇಡಂ ಪಟ್ಟಣದ ಕೆ.ಎನ್ ಜೆಡ್ ಫಂಕ್ಷನ್ ಹಾಲ್ ನಲ್ಲಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಅಂಗವಾಗಿ ಜಗತ್ತಿನಾದ್ಯಂತ ಅನ್ನದಾನ, ಗಿಡಮರಗಳು ನೆಡುವುದು, ಅನಾಥ ಮಕ್ಕಳ ಪೋಷಣೆ, ಬಡಮಕ್ಕಳಿಗೆ ಸಾಮೂಹಿಕ ವಿವಾಹ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ಶಿಬಿರ , ವೃದ್ಧಾಶ್ರಮಗಳಲ್ಲಿ ದಾನ, ಸೇರಿದಂತೆ ಅನಾಥಾಶ್ರಮಗಳು ತೆರೆದು ಸಹಕಾರ ಮಾಡುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಮುಖಂಡರೊಬ್ಬರು ಹೇಳಿದರು.

ಸೇಡಂ ಪಟ್ಟಣ ಸೇರಿದಂತೆ ತಾಲ್ಲೂಕಿನ ಬೆಟಗೇರಾ ಬಿ.ಆಡಕಿ, ಕುರಕುಂಟಾ, ಮಳಖೇಡ, ಬಿಬ್ಬಳ್ಳಿ, ಹಾಬಳ ಟಿ, ರಂಜೋಳ, ಹಂಗನಹಳ್ಳಿ, ಸಂಗಾವಿ ಎಮ್, ಸಟಪಟನಹಳ್ಳಿ ಸೇರಿ ಇನ್ನೂ ಹಲವು ಗ್ರಾಮಗಳಿಂದ 92 ಜನರು ಭಾಗವಹಿಸಿ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಹಮ್ಜಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಸಯ್ಯದ್ ಸಂಶುದ್ದೀನ್ ಶಾ ಜಮೆ ಸಲಾಸಿಲ್ ಮಾತನಾಡಿ, ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ರಕ್ತದಾನ ಶಿಬಿರ ಮಾಡುವ ಮೂಲಕ ಬಡ ಜನರಿಗೆ ರಕ್ತದ ಕೊರತೆ ಆಗದಂತೆ ಸೇವೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಮೀರ್ ಜಾನ್, ಅಬ್ದುಲ್ ಕದಿರ್, ಡಾ.ಅಲ್ಲಾಭಕ್ಷ್ ಪಟೇಲ್, ಬಾಬಾ ಖಾನ್, ಮೋದೀನ್, ಮೆಹಬೂಬ್ ಖಾನ್, ಹುಸೇನ್ ಪಟೇಲ್, ಮುಹಮ್ಮದ್ ಮೌಲಾನ ಸೇರಿ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News