×
Ad

ಸೇಡಂ ಸಿಪಿಐ ಮಹಾದೇವ ದಿಡಿಮನಿಗೆ ಉತ್ತಮ ಸರ್ಕಲ್ ಪ್ರಶಸ್ತಿ

Update: 2025-12-04 16:35 IST

ಕಲಬುರಗಿ: ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸೇಡಂ ವ್ಯಾಪ್ತಿಯ ವೃತ್ತ ನಿರೀಕ್ಷಕ ಅಧಿಕಾರಿಯಾಗಿರುವ ಮಹಾದೇವ ದಿಡಿಮನಿ ಅವರಿಗೆ ವರ್ಷದ ಉತ್ತಮ ಸರ್ಕಲ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

ದಿಡಿಮನಿ ನೇತೃತ್ವದಲ್ಲಿ 2024-25ನೇ ಸಾಲಿನಲ್ಲಿ ಸುಮಾರು 100ಕ್ಕೂ ಹೆಚ್ಚು ಬೈಕ್‌ಗಳನ್ನು ಪತ್ತೆ ಹಚ್ಚಲಾಗಿತ್ತು. ಕಳ್ಳತನವಾದ 160 ಗ್ರಾಂ. ಚಿನ್ನ ಮತ್ತು 400 ಗ್ರಾಂ. ಬೆಳ್ಳಿ ಪತ್ತೆ ಹಚ್ಚಿ ವಾರಸುದಾರರಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಳಖೇಡ ಹಾಗೂ ಕುರಕುಂಟ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಗಳು ಯಶಸ್ವಿಯಾಗಿ ತಲುಪಿಸಿದ ಮಹಾದೇವ ದಿಡಿಮನಿ ಅವರಿಗೆ ವರ್ಷದ ಉತ್ತಮ ಸರ್ಕಲ್ ಪ್ರಶಸ್ತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ನೀಡಿ ಗೌರವಿಸಿದರು. 

ಮಹಾದೇವ ದಿಡಿಮನಿ ಅವರು ಸಿಪಿಐ, ಪಿಐ ಅಧಿಕಾರಿಗಳ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಬ್ಯಾಡ್ಮಿಂಟನ್ ಸಿಂಗಲ್ಸ್ , ಡಬಲ್ಸ್‌ನಲ್ಲಿ ಪ್ರಥಮ, 9 ಎಂಎಂ ಪಿಸ್ತೂಲ್‌ ಶೂಟಿಂಗ್ ನಲ್ಲಿ ದ್ವಿತೀಯ ಸ್ಥಾನ, ಜಾವೇಲಿಯನ್ ಥ್ರೋನಲ್ಲಿ 3ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News