ಸೇಡಂ | ಸಿಜೆಐ ಗವಾಯಿ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ವಿರುದ್ಧ ಕ್ರಮಕ್ಕೆ ಆಗ್ರಹ
Update: 2025-10-09 21:49 IST
ಕಲಬುರಗಿ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ ಕಿಶೋರ್ ರಾಕೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೇಡಂನಲ್ಲಿ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸೇಡಂ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇಲ್ಲಿನ ನ್ಯಾಯವಾದಿಗಳ ಸಂಘದ ವಕೀಲರು ಕಾರ್ಯ ಕಲಾಪದಿಂದ ಉಳಿದು ಕಿಶೋರ್ ರಾಕೇಶ್ ವಕೀಲನ ಹೀನ ಕೃತ್ಯಕ್ಕೆ ಮಾಡಿದ್ದಕ್ಕಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸೇಡಂ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಚಕ್ರಪಾಣಿ ಕುಲಕರ್ಣಿ, ಶ್ರೀದೇವಿ ಆರ್.ಕಾಡಾ ಉಪಾಧ್ಯಕ್ಷೆ, ರಾಮರೆಡ್ಡಿ ಪಾಟೀಲ್, ಚಂದ್ರಕಾಂತ ದೇವರಕೊಂಡ, ರಾಜಕುಮಾರ್, ಅಶೋಕ್ ಸೇರಿ ಮತ್ತಿತರರು ಇದ್ದರು.