ಸೇಡಂ | ಸಂಗೊಳ್ಳಿ ರಾಯಣ್ಣರ ಜನ್ಮದಿನಾಚರಣೆಯ ಅಂಗವಾಗಿ ಹಣ್ಣು-ಹಂಪಲು ವಿತರಣೆ
Update: 2025-08-15 22:07 IST
ಕಲಬುರಗಿ: 228ನೇ ಸಂಗೊಳ್ಳಿ ರಾಯಣ್ಣನ ಜನ್ಮದಿನೋತ್ಸವ ಅಂಗವಾಗಿ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗ ಸೇಡಂ ವತಿಯಿಂದ ಸರ್ಕಾರಿ ಆಸ್ಪತ್ರೆಯ ಸಾರ್ವಜನಿಕ ಸೇಡಂ ಒಳ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್, ನೀರಿನ ಬಾಟಲ್ ಗಳು ಮತ್ತಿತರ ಆಹಾರ ಪಟ್ಟಣಗಳನ್ನು ಒಳ ರೋಗಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ನಾಗರಾಜ್, ಡಾ.ಸದಾಶಿವ ಅವರು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಹಾಲುಮತದ ಸಮಾಜದ ಮುಖಂಡರಾದ ಮಲ್ಲು ಪೂಜಾರಿ ರುದ್ನೂರ್, ನಾಗೇಂದ್ರಪ್ಪ ಪೂಜಾರಿ ನೀಲಹಳ್ಳಿ, ಗುಂಡಪ್ಪ ಪೂಜಾರಿ ಬೀರನಳಿ, ರಘು ಪೂಜಾರಿ, ಸಾಬಣ್ಣ ಪೂಜಾರಿ, ಸಂತೋಷ್ ಪೂಜಾರಿ, ಶಾಂತು ಪೂಜಾರಿ, ರೇವಣಸಿದ್ಧಪ್ಪ ಸಿಂದೆ, ಸಿದ್ದು ದೊರೆ, ರಾಮು ಇಂಜಾಲ್ಲಿಕರ್ ಸೇರಿದಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು ಭಾಗವಹಿಸಿದ್ದರು.