ಸೇಡಂ| ಮಹಾ ಪುರುಷರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ: ಶ್ರೀಯಾಂಕ್ ಧನಶ್ರೀ
ಕಲಬುರಗಿ: ಹಿಂದಿನ ಕಾಲದಲ್ಲಿ ಬ್ರಿಟಿಷರ ಜೊತೆ ಯುದ್ದ ನಡೆಸಿ ದೇಶದ ಮಹಾ ಪುರುಷರು ತ್ಯಾಗ ಬಲಿದಾನದಿಂದ ನಮ್ಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಸೇಡಂ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಹೇಳಿದರು.
ಅವರು ಸೇಡಂ ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಅವರಣದಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ಹೇಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದರ ಕುರಿತು ಅರಿತುಕೊಳ್ಳಲು ವಿಧ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದ್ದಾಗ ಮಾತ್ರ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ, ಅಧ್ಯಯನದಿಂದ ಸ್ವಾತಂತ್ರ್ಯ ಪಡೆಯಲು ಮಹಾಪುರುಷರ ಬಲಿದಾನದ ಬಗ್ಗೆಯೂ ತಿಳಿಯಲು ಸಾಧ್ಯವಾಗುತ್ತದೆ. ಎಲ್ಲರಿಗೂ ದೇಶಾಭಿಮಾನದ ಭಕ್ತಿ ಇರಬೇಕು ಎಂದರು.
ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತರು ಪ್ರಭು ರೆಡ್ಡಿ ಮಾತನಾಡಿದರು.
ಈ ಸಮಯದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚೆನ್ನಪ್ಪ ರಾಯಣ್ಣನ, ಟಿಎಚ್ಒ ಸಂಜು ಕುಮಾರ್ ಪಾಟೀಲ್, ಪುರಸಭೆ ಅಧ್ಯಕ್ಷರು ವಿರೇಂದ್ರ ನಾಗೇಂದ್ರ ರೂದ್ನೂರ, ಸಿಪಿಐ ಮಹಾದೇವ ದಿಡಿಮನಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ್ ಪುಲಾರೆ, ಗ್ರೇಟ್ 2 ತಹಶಿಲ್ದಾರ ಭೀಮಣ್ಣ ಕುದುರೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರವಿಂದ ಪಸಾರ, ಅಲ್ಪಸಂಖ್ಯಾತರ ಅಧಿಕಾರಿ, ಕೃಷಿ ಸಹಾಯಕ ಆಯುಕ್ತರು, ತೋಟಗಾರಿಕೆ ಇಲಾಖೆ ಅಧಿಕಾರಿ, ಪಶು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.