×
Ad

ಸೇಡಂ| ಬೆಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-08-31 16:43 IST

ಕಲಬುರಗಿ: ಅತಿಯಾದ ಮಳೆಯಿಂದ ಸೇಡಂ ತಾಲೂಕಿನಲ್ಲಿ ಬೆಳೆ ಹಾನಿಯಾದ ಪ್ರದೇಶಗಳಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ವೀಕ್ಷಣೆ ಮಾಡಿದರು.

ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಯಾದ ಪ್ರಮುಖ ಹೊಲಗಳಿಗೆ ತೆರಳಿದ ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರು ಹೆಸರು ಹಾಗೂ ತೊಗರಿ ಬೆಳೆಗಳನ್ನು ಪರಿಶೀಲನೆ ನಡೆಸಿದರು.

ಸೇಡಂ ತಾಲ್ಲೂಕಿನ ಕಲಕಂಭ ಹಾಗೂ ಅಳ್ಳೊಳ್ಳಿ ಗ್ರಾಮಗಳ ಹೊಲಗಳಿಗೆ ತೆರಳಿ ರೈತರ ಅಭಿಪ್ರಾಯಗಳನ್ನು ಆಲಿಸಿದರು. ಜೊತೆಯಲ್ಲಿದ್ದ ಕೃಷಿ ಅಧಿಕಾರಿಗಳಿಗೆ ಬೆಳೆ ಹಾನಿ ಬಗ್ಗೆ ಪ್ರಾಥಮಿಕ ವರದಿಯನ್ನು ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನದ ತಾಲೂಕಾಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್‌, ಕೃಷಿ ಸಮಾಜ ಅಧ್ಯಕ್ಷ ಬಸವಾರಜ ರೇವಗೊಂಡ, ಕೃಷಿ ಸಮಾಜದ ರಾಜ್ಯ ಸದಸ್ಯ ಬಸವರಾಜ ಪಾಟೀಲ್‌ ಊಡಗಿ ಸೇರಿದಂತೆ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News