×
Ad

ಕಲಬುರಗಿ | ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸಯ್ಯದ್ ಮುಹಮ್ಮದ್‌ ಅಲಿ ಅಲ್ ಹುಸೈನಿ ಅವರಿಗೆ ಚಾಣಕ್ಯ ಪ್ರಶಸ್ತಿ ಪ್ರದಾನ

Update: 2025-10-12 23:19 IST

ಕಲಬುರಗಿ: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI)  ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ನೀಡುವ PRCI 2025ರ ಚಾಣಕ್ಯ ಪ್ರಶಸ್ತಿಯನ್ನು ಖಾಜಾ ಬಂದನಾವಾಜ್ ವಿವಿಯ ಕುಲಪತಿ, ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರೂ ಆಗಿರುವ ಸಯ್ಯದ್ ಮುಹಮ್ಮದ್‌ ಅಲಿ ಅಲ್ ಹುಸೈನಿ ಅವರಿಗೆ ನೀಡಿ ಗೌರವಿಸಿದೆ.

ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 26ರಂದು ಗೋವಾದಲ್ಲಿ ನಡೆದ 19ನೇ PRCI ಗ್ಲೋಬಲ್ ಕಾಂಕ್ಲೇವ್ ಸಂದರ್ಭದಲ್ಲಿ ಪ್ರದಾನ ಮಾಡಲಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆಗಳನ್ನು ನೀಡಿದಕ್ಕಾಗಿ ಮುಹಮ್ಮದ್‌ ಅಲಿ ಅಲ್ ಹುಸೈನಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 

ಹುಸೈನಿ ಅವರ ಮಾರ್ಗದರ್ಶನದಲ್ಲಿ ಕೆಬಿಎನ್ ವಿವಿ ಶಿಕ್ಷಣ, ಸಂಶೋಧನೆ ಮತ್ತು ಸಮುದಾಯ ಸೇವೆಯಲ್ಲಿ ಪ್ರಗತಿಶೀಲ ಕೇಂದ್ರವಾಗಿ ಬೆಳೆಯಿತು. ನವೀನತೆ, ಸಂಶೋಧನೆ ಮತ್ತು ಅಧ್ಯಯನದ ಪ್ರಮುಖ ಕೇಂದ್ರವಾಗಿದೆ. 

ಈ ಪ್ರಶಸ್ತಿ ಭಾಜನರದ ನಂತರ ಸಯ್ಯದ್ ಮುಹಮ್ಮದ್‌ ಅಲಿ ಅಲ್ ಹುಸೈನಿ ಅವರನ್ನು Outlook ಮಾಗಝಿನ್ “ಪಿಲ್ಲರ್ಸ್ ಆಫ್ ವಿಕ್ಸಿತ್ ಭಾರತ್” ವಿಶೇಷ ಆವೃತ್ತಿಯಲ್ಲಿ ಗುರುತಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News