×
Ad

ನಿಗದಿತ ಸಮಯಕ್ಕೆ ಕಲಬುರಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಸಚಿವ ಶಿವಾನಂದ ಪಾಟೀಲ್

Update: 2025-08-19 18:50 IST

ಬೆಂಗಳೂರು, ಆ.19: ನಿಗದಿತ ಸಮಯದಲ್ಲಿ ಕಲಬುರಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗುತ್ತದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರಕಾರದಿಂದ ಜವಳಿ ಪಾರ್ಕ್‍ಗೆ 390 ಕೋಟಿ ರೂ. ಹಣ ಮೀಸಲು ಇಡಲಾಗಿದೆ. ಜೊತೆಗೆ ಕೇಂದ್ರದ ಹಣ ಸಹಾಯದಿಂದ ಕಾಲಕ್ಕೆ ಸರಿಯಾಗಿ ಪಾರ್ಕ್ ನಿರ್ಮಾಣದ ಕೆಲಸವಾಗಲಿದೆ ಎಂದರು.

ದೇಶದಲ್ಲಿ 7 ಕಡೆ ಪಿಎಂ ಮಿತ್ರ ಪಾರ್ಕ್ ನಿರ್ಮಾಣಕ್ಕೆ ಅನುಮತಿ ಕೊಡಲಾಗಿದೆ. ಕರ್ನಾಟಕಕ್ಕೆ ಇದು ಸಿಕ್ಕಿರುವುದು ಸುದೈವ. ಪಿಎಂ ಮಿತ್ರ ಪಾರ್ಕ್ ನಿರ್ಮಾಣ ಮಾಡಲು ಸುಮಾರು 7ರಿಂದ 10 ವರ್ಷಗಳು ಬೇಕಾಗುತ್ತದೆ. ಈ ಪಾರ್ಕ್ ಮಾಡಲು 3 ಸಾವಿರ ಎಕರೆ ಜಾಗ ಬೇಕು. ಈ ಜವಳಿ ಪಾರ್ಕ್ ಬಂದರೆ 1 ಲಕ್ಷ ಉದ್ಯೋಗ ಸಿಗಲಿದೆ ಎಂದು ಶಿವಾನಂದ ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News