×
Ad

ದೇಶದಲ್ಲಿ ಈ ಬಾರಿ ಬಿಜೆಪಿ 230 ಸ್ಥಾನಗಳನ್ನು ದಾಟಲ್ಲ : ಪ್ರಿಯಾಂಕ್ ಖರ್ಗೆ

Update: 2024-06-02 15:53 IST

ಕಲಬುರಗಿ : ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರವಿವಾರ ತಮ್ಮ ನಿವಾಸದಲ್ಲಿ ಮಾತನಾಡಿ, "ಜನ ಏನು ತೀರ್ಪು ಕೊಟ್ಟರೂ ಎಲ್ಲರೂ ತಲೆ ಬಾಗಬೇಕು. ಈ ಬಾರಿ 230 ಬಿಜೆಪಿ ದಾಟಲ್ಲ, ಜನ ನಮಗೆ ಆಶೀರ್ವಾದ ಮಾಡುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ʼಕಳೆದ ವಿಧಾನಸಭೆ ಚುನಾವಣೆಯಲ್ಲಿ 100 ದಾಟಲ್ಲ ಎಂದು ಹೇಳುತ್ತಾ ಇದ್ದರು. ಎಲ್ಲಾ ಸರ್ವೇಗಳು ಸಮ್ಮಿಶ್ರ ಸರ್ಕಾರ ಬರುತ್ತೆ, ಯಾರಿಗೂ ಬಹುಮತ ಬರಲ್ಲ ಎಂದು ಹೇಳಿತ್ತು. ಹಲವು ಬಿಜೆಪಿ ನಾಯಕರು ಸೂಟ್ ಕೂಡ ಹೋಲಿಸಿದರು. ಕಳೆದ ವಿಧಾನಸಭೆ ಚುನಾವಣೆ ಎಕ್ಸಿಟ್ ಪೊಲ್ ಉಲ್ಟಾ ಆಯ್ತುʼ ಎಂದರು.

ʼಜನರ ಎಕ್ಸಿಟ್ ಪೋಲ್ ಮುಖ್ಯ, ಇನ್ನೇನು 48 ಗಂಟೆಯಲ್ಲಿ ಫಲಿತಾಂಶ ಬರುತ್ತೆ. ಈ ಎಕ್ಸಿಟ್ ಪೋಲ್ ಮತ್ತೆ ಜನರ ಎಕ್ಸಿಟ್ ಪೋಲ್ ನಲ್ಲಿ ಏನು ಬರುತ್ತೆ ನೋಡೋಣ. ನಮಗೆ ಸಂಪೂರ್ಣ ವಿಶ್ವಾಸ ಇದೆ. ರಾಜ್ಯದಲ್ಲಿ ಕಾಂಗ್ರೆಸ್ 18 ಸ್ಥಾನ ಗೆಲ್ಲುತ್ತದೆ. ದೇಶದಲ್ಲಿ ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲುತ್ತೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News