ವಾಡಿ | ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ
Update: 2026-01-13 19:02 IST
ವಾಡಿ, ಜ.13: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನಾಚರಣೆ ಅಂಗವಾಗಿ ವಿಶೇಷ ಧ್ಯಾನ, ಯೋಗ ಹಾಗೂ ಪ್ರಾಣಾಯಾಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸ್ವಾಮಿ, ವಿವೇಕಾನಂದರು ಆಧ್ಯಾತ್ಮಿಕತೆಗೆ ಹೊಸ ಭಾಷೆಯಯನ್ನು ಬರೆದುಕೊಟ್ಟ ಮಹಾನ್ ಸಂತ. ಅವರು ಇಂದಿನ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಓಂ ಶಾಂತಿ ಕೇಂದ್ರದ ಮುಖ್ಯಸ್ಥರಾದ ಬಿ.ಕೆ. ಮಹಾನಂದ ಮಾತನಾಡಿದರು.
ಮುಖಂಡರಾದ ಶರಣಗೌಡ ಚಾಮನೂರ, ಭೀಮರಾವ ದೊರೆ, ಆರ್ಜನ ಕಾಳೆಕರ್, ಕಿಶನ ಜಾಧವ, ವಿಶ್ವರಾಧ್ಯ ತಳವಾರ, ಪ್ರಕಾಶ ಪವಾರ, ಸುಭಾಷ ಬಳಚಡ್ಡಿ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.