×
Ad

ಯಡ್ರಾಮಿ | ಕಡಕೋಳ ಮಡಿವಾಳೇಶ್ವರ ಭವ್ಯ ರಥೋತ್ಸವ

Update: 2025-12-13 18:05 IST

ಕಲಬುರಗಿ: ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ತತ್ವಪದ ಸಾಹಿತ್ಯದ ಪ್ರಾರಂಭಿಕ ಕಡಕೋಳ ಮಡಿವಾಳಪ್ಪನವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.

ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆಗಳಲ್ಲಿ ಕಡಕೋಳ ಮಡಿವಾಳಪ್ಪನವರ ಜಾತ್ರೆಗೆ ಹೂರ ರಾಜ್ಯ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಹರಿದುಬಂದ ಜನಸಾಗರ ದೇವಸ್ಥಾನದ ಆವರಣದಲ್ಲಿ ಬೀಡುಬಿಟ್ಟಿತ್ತು. ಶುಕ್ರವಾರ ನಸುಕಿನಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ಬೆಳಗ್ಗೆ ನಡೆದ ಮಡಿವಾಳಪ್ಪನವರ ಪಲ್ಲಕ್ಕಿ ಉತ್ಸವದಲ್ಲಿಯೂ ಜನಜಂಗುಳಿ ಇತ್ತು. ಮಠದ ಸ್ವಾಮೀಜಿ ರುದ್ರಮುನಿ ಶಿವಾಚಾರ್ಯರ ನೇತ್ವದಲ್ಲಿ ಆರಂಭವಾದ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಸುತ್ತಿ ರಥದ ಬಳಿ ಬಂದಿತು. ರಥವನ್ನು ಐದು ಸುತ್ತು ಹಾಕಿದ ನಂತರ ಮಡಿವಾಳಪ್ಪನವರ ರಥೋತ್ಸವ ಆರಂಭವಾಯಿತು.

ಮಠದ ಎದುರಿನಿಂದ ರಥ 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿಯಿತು. ಇದರಿಂದ ರಥೋತ್ಸವ ಅರ್ಧದಲ್ಲೇ ನಿಂತಿದೆ.

ಅವಘಡದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸುತ್ತಲಿನ ಭಕ್ತರನ್ನು ಚದುರಿಸಿದರು. ದೇವಸ್ಥಾನ ಸಮಿತಿಯವರು ರಥದ ಬುಡಕ್ಕೆ ಸದ್ಯ ಕಲ್ಲು ಹಾಗೂ ಮರದ ತುಂಡು ಜೋಡಿಸಿಟ್ಟು ಅದು ಬೀಳದಂತೆ ಕ್ರಮಹಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News