×
Ad

ಮಂಜೇಶ್ವರ: ಎಲ್‌ಡಿಎಫ್ ಅಭಿವೃದ್ಧಿ ಮುನ್ನಡೆ ಜಾಥಾ ಉದ್ಘಾಟನೆ

Update: 2026-02-14 14:38 IST

ಮಂಜೇಶ್ವರ: ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಅವರ ನೇತೃತ್ವದಲ್ಲಿ ಮಂಜೇಶ್ವರ ಮಂಡಲ ಎಲ್‌ಡಿಎಫ್ ಅಭಿವೃದ್ಧಿ ಮುನ್ನಡೆ ಜಾಥಾವನ್ನು ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸಿದರು. ಸಿಪಿಐ ಮುಖಂಡ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಕೆ. ಜಯರಾಮ ಬಳ್ಳಂಗೂಡಲ್ ಉಪಸ್ಥಿತರಿದ್ದರು.

ನಾರಾಯಣ ಮವ್ವಾರ್ ಸ್ವಾಗತಿಸಿದರು. ಡೆಪ್ಯುಟಿ ಲೀಡರ್ ಸಿ.ಎ. ಸುಬೈರ್, ಜಾಥಾ ಪೈಲಟ್ ಅಹ್ಮದ್ ಅಲಿ ಕುಂಬಳೆ, ತಾಜುದ್ದೀನ್ ಮೊಗ್ರಾಲ್, ಡಿ. ಸುಬ್ಬಣ್ಣ ಆಳ್ವ, ಪಿ. ರಘುದೇವನ್ ಮಾಸ್ತರ್, ಎಸ್. ರಾಮಚಂದ್ರ ಮೊದಲಾದವರು ಮಾತನಾಡಿದರು. ಕೆ. ನಾರಾಯಣ ಧನ್ಯವಾದಗೈದರು.

ಜಾಥಾ ಶನಿವಾರ ಬೆಳಿಗ್ಗೆ ಪೆರ್ಲ ಪೇಟೆಯಿಂದ ಆರಂಭಿಸಿದ ಪರ್ಯಟನೆ, ಬಾಡೂರು, ಸೀತಾಂಗೋಳಿ, ಕಳತ್ತೂರು ಮೊದಲಾದೆಡೆ ಸ್ವಾಗತಿಸಲಾಯಿತು. ಸಂಜೆ ಬಾಯಾರಿನಲ್ಲಿ ಜಾಥಾ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News