ಮಡಿಕೇರಿ ದಸರಾದಲ್ಲಿ ದಾಂಧಲೆ; ಮೂವರ ವಿರುದ್ಧ ಪ್ರಕರಣ ದಾಖಲು
Update: 2025-10-04 23:01 IST
ಮಡಿಕೇರಿ, ಅ.4: ಮಡಿಕೇರಿಯ ದಸರಾ ಕಲಾ ವೇದಿಕೆಯಲ್ಲಿ ಬಹುಮಾನ ವಿತರಣೆ ಸಂದರ್ಭ ದಾಂಧಲೆ ನಡೆಸಿ ಒಟ್ಟು ಎರಡು ಲಕ್ಷ ರೂಪಾಯಿ ನಷ್ಟ ಪಡಿಸಿರುವ ಹಿನ್ನೆಲೆಯಲ್ಲಿ ಪವನ್ ಕುಮಾರ್ ಕೆ.ಆರ್., ವಿನೋದ್ ಕಾರ್ಯಪ್ಪ, ಸುಹಾಸ್ ಶೆಟ್ಟಿ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾದ ಇತರರನ್ನೂ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.