ವಿರಾಜಪೇಟೆ | ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ
Update: 2025-02-17 23:10 IST
ವಿರಾಜಪೇಟೆ: ವ್ಯಕ್ತಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ಹೊರವಲಯದ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ.
ದಿ.ಪೊನ್ನಪ್ಪ ಹಾಗೂ ದಮಯಂತಿ ದಂಪತಿಯ ಪುತ್ರ ಬಿ.ಪಿ.ಅನಿಲ್ ಕುಮಾರ್ (ಸತೀಶ್) (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತ ವ್ಯಕ್ತಿ ಅವಿವಾಹಿತನಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತಾಯಿ ಹಾಗೂ ಸಹೋದರ ಮನೆಯಲ್ಲಿದ್ದಾಗಲೇ ಕೋಣೆಗೆ ತೆರಳಿದ ಅನಿಲ್ ಕುಮಾರ್ ಗುಂಡು ಹೊಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.