×
Ad

ವಿರಾಜಪೇಟೆ : ಲಾರಿ-ಆ್ಯಂಬುಲೆನ್ಸ್ ಢಿಕ್ಕಿ; ಓರ್ವನಿಗೆ ಗಾಯ

Update: 2024-03-23 16:22 IST

ಮಡಿಕೇರಿ ಮಾ.23 : ಲಾರಿ ಮತ್ತು ಆ್ಯಂಬುಲೆನ್ಸ್ ನಡುವೆ ಢಿಕ್ಕಿಯಾಗಿ ಓರ್ವ ಗಾಯಗೊಂಡಿರುವ ಘಟನೆ ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಕೊಳತ್ತೋಡು ಎಂಬಲ್ಲಿ ನಡೆದಿದೆ.

ಅಪಘಾತದಿಂದ ಗಾಯಗೊಂಡಿರುವ ಆ್ಯಂಬುಲೆನ್ಸ್ ಚಾಲಕನನ್ನು ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಗ್ಗೆ ನಡೆದ ಅಪಘಾತದ ಗಾಯಾಳುವೊಬ್ಬರನ್ನು ಮೈಸೂರಿಗೆ ಕರೆದೊಯ್ಯುತ್ತಿದ್ದ ವಿರಾಜಪೇಟೆ ಸರಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್, ಎದುರಿನಿಂದ  ಬಂದ ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಲು ಲಾರಿ ಚಾಲಕ ಲಾರಿಯನ್ನು ರಸ್ತೆ ಪಕ್ಕಕ್ಕೆ ಇಳಿಸಿ  ಸಮಯ ಪ್ರಜ್ಞೆ ಮೆರೆದಿದ್ದಾರೆ. ಈ ವೇಳೆ ರಸ್ತೆ  ಬದಿಯಲ್ಲಿದ್ದ ಮರಕ್ಕೆ ಲಾರಿ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಆ್ಯಂಬುಲೆನ್ಸ್ ಚಾಲಕ ಹೊರತು ಪಡಿಸಿ ಉಳಿದವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News