×
Ad

ಮಲ್ಲಿಕಾರ್ಜುನ ನಿಂಗಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಗಿರಿಜಿಲ್ಲೆಗೆ ಸಂದ ಗೌರವ : ಶಾಸಕ ಚೆನ್ನಾರೆಡ್ಡಿ ಪಾಟೀಲ್

Update: 2025-11-05 18:29 IST

ಯಾದಗಿರಿ: ತೆರೆಮರೆಯಲ್ಲಿ ಪರಿಸರ ಉಳಿಸಿ, ಬೆಳೆಸಿ ಅಗಾಧ ಸೇವೆ ಮಾಡಿರುವ ತಾಲೂಕಿನ ರಾಮಸಮುದ್ರದ ವನಕಾಯಕ‌ ಜೀವಿ ಮಲ್ಲಿಕಾರ್ಜುನ ನಿಂಗಪ್ಪ ಅವರ ತ್ಯಾಗದ ಶ್ರಮ‌ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ಗಿರಿಜಿಲ್ಲೆಗೆ ಸಂದ ಗೌರವ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ತಮ್ಮ ಶಾಸಕರ ಕಚೇರಿಯಲ್ಲಿ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜನ ಅವರನ್ನು ಸನ್ಮಾನಿಸಿ ಮಾತನಾಡಿದರು.

ತಾವು ಮಾಡಿದ ಸೇವೆಯನ್ನು ಎಲ್ಲೂ ಹೇಳದೆ ಮತ್ತು ಯಾವುದೇ ಫಲಾಪೇಕ್ಷೆ ಬಯಸದೇ ಇರುವುದರಿಂದಲೇ ಸಾಧಕರನ್ನು ಹುಡುಕಿ ರಾಜ್ಯ ಸರ್ಕಾರ ಕೊಟ್ಟ ಪ್ರಶಸ್ತಿ ಪಟ್ಟಿಯಲ್ಲಿ ನಮ್ಮ ರಾಮಸಮುದ್ರ ವ್ಯಕ್ತಿಯು ಸೇರಿದ್ದು, ತುಂಬಾ ಸಂತಸ ತಂದಿದೆ ಎಂದು ಹೇಳಿದರು.

ಈ ವೇಳೆ ಬಸವರಾಜಪ್ಪ ಬಾಗ್ಲಿ, ಶರಣಪ್ಪ ಗೌಡ ಕೌಳೂರ್, ಪ್ರಭುಲಿಂಗ ವಾರದ, ಮಲ್ಲಣ್ಣ ಐಕೂರ್, ಮಾಳಿಂಗರಾಯ ಕಂದಳ್ಳಿ, ಸಾಯಿಬಣ್ಣ ಕೆಂಗುರಿ,ಮಲ್ಲಿಕಾರ್ಜುನ ಈಟೆ,ಲಚಮ ರೆಡ್ಡಿ, ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News