Kanakagiri | ಹಿರಿಯ ರಂಗಕಲಾವಿದ ಮಲಕೇಶಿ ಕೋಟೆ ನಿಧನ
ಕನಕಗಿರಿ: ಹಿರಿಯ ಕಲಾವಿದ ಹಾಗೂ ಪಟ್ಟಣದ ಐದನೇ ವಾರ್ಡ್ ನಿವಾಸಿ ಮಲಕೇಶಿ ಕೋಟೆ (68) ಮಂಗಳವಾರ ನಿಧನರಾದರು.
ವಿವಿಧ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಕಲಾಸೇವೆ ಸಲ್ಲಿಸಿದ್ದ ಅವರು, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬುಧವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಪ್ರವಾಸಿ ಮಂದಿರದ ಸಮೀಪದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.