×
Ad

ಕನಕಗಿರಿ | ಸೇವಾ ಕೇಂದ್ರ, ಬೇಕರಿಯಲ್ಲಿ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

Update: 2026-01-30 23:26 IST

ಕನಕಗಿರಿ : ಪಟ್ಟಣದ ನವಲಿ ರಸ್ತೆಯಲ್ಲಿರುವ ಎಸ್‌ಬಿಐ ಸೇವಾ ಕೇಂದ್ರ ಹಾಗೂ ಹಿರೇಖೇಡ ರಸ್ತೆಯಲ್ಲಿರುವ ಬೇಕರಿಗೆ ಶುಕ್ರವಾರ ತಡರಾತ್ರಿ ಕಳ್ಳರು ಸೆಟ್ರಸ್ ಮುರಿದು ಕಳ್ಳತನ ನಡೆಸಿದ ಘಟನೆ ನಡೆದಿದೆ.

ಬೋಲೆರೋ ಪಿಕ್‌ಅಪ್ ಗೂಡ್ಸ್ ವಾಹನದಲ್ಲಿ ಬಂದಿರುವ ಮೂವರು ಕಳ್ಳರು ಎರಡು ಸ್ಥಳಗಳಲ್ಲಿ ಕಳ್ಳತನ ನಡೆಸಿರುವುದು ತಿಳಿದು ಬಂದಿದೆ. ಕಬ್ಬಿಣದ ರಾಡ್ ಬಳಸಿ ಶಟರ್ ಮುರಿಯುತ್ತಿರುವುದು, ಒಬ್ಬ ಯುವಕ ಕೈಯಲ್ಲಿ ಚಾಕು ಹಿಡಿದು ಸುತ್ತಾಡುತ್ತಿರುವುದು ಹಾಗೂ ಮತ್ತೊಬ್ಬನು ವಾಹನ ಚಾಲನೆ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬೇಕರಿ ಹಾಗೂ ಸೇವಾ ಕೇಂದ್ರದ ಮುಂದೆ ಇಬ್ಬರು ಮುಸುಕುಧಾರಿಗಳಾಗಿ ಕಾಣಿಸಿಕೊಂಡು ಹಣ ದೋಚಿರುವುದು ದೃಢಪಟ್ಟಿದೆ. ಬೇಕರಿಯಿಂದ ಗುಡ್‌ಡೇ ಬಿಸ್ಕೀಟ್ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಎಸ್‌ಬಿಐ ಸೇವಾ ಕೇಂದ್ರದ ಮಾಲೀಕ ವೀರೇಶ ಅವರು ತಮ್ಮ ಕೇಂದ್ರದಿಂದ ₹1.60 ಲಕ್ಷ ನಗದು ಹಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ

.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News