Koppal | ಕೀಟಬಾಧೆಯಿಂದ ಸೂರ್ಯಕಾಂತಿ ಬೆಳೆ ನಾಶ: 2.5 ಎಕರೆ ಬೆಳೆಯನ್ನು ನಾಶಪಡಿಸಿದ ರೈತ
ಕೊಪ್ಪಳ (ಅಳವಂಡಿ): ಕೀಟಬಾಧೆಯಿಂದ ಸೂರ್ಯಕಾಂತಿ ಬೆಳೆ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ ನೊಂದ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ 2.5 ಎಕರೆ ಜಮೀನಿನ ಬೆಳೆಯನ್ನು ಹರಗಿ ನಾಶಪಡಿಸಿರುವ ಘಟನೆ ಸಮೀಪದ ಭೈರಾಪುರ ಗ್ರಾಮದಲ್ಲಿ ನಡೆದಿದೆ.
ಭೈರಾಪುರ ಗ್ರಾಮದ ರೈತ ಮಾಬುಸಾಬ್ ನದಾಫ್ ಅವರು ತಮ್ಮ 2.5 ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದರು. ಬೆಳೆ ಕಟಾವಿಗೆ ಬರುವ ಹಂತದಲ್ಲಿ ತೀವ್ರ ಕೀಟಬಾಧೆ ಕಾಣಿಸಿಕೊಂಡ ಪರಿಣಾಮ ಸಂಪೂರ್ಣ ಬೆಳೆ ಹಾನಿಗೊಳಗಾಗಿದೆ.
ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ, ಕೃಷಿಗಾಗಿ ಮಾಡಿದ ಖರ್ಚು ಕೂಡ ಮರಳಿ ಬಾರದ ಆತಂಕದಿಂದ ಬೇಸತ್ತ ರೈತ, ಕೊನೆಗೆ ಟ್ರ್ಯಾಕ್ಟರ್ ಮೂಲಕ ಇಡೀ ಬೆಳೆಯನ್ನು ಹರಗಿ ನಾಶಪಡಿಸಿದ್ದಾರೆ.