ಕೊಪ್ಪಳ | ಯೂರಿಯಾ ಅಭಾವ: ರೈತರ ದಿಢೀರ್ ಪ್ರತಿಭಟನೆ
Update: 2025-08-08 15:17 IST
ಕೊಪ್ಪಳ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದರೆ ಅಗತ್ಯ ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ, ಗೊಬ್ಬರ ಬೇರೆ ಕಡೆ ಸಾಗಿಸಲಾಗಿತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
ದಿಡೀರ ಪ್ರತಿಭಟನೆಗಿಳಿದ ರೈತರು, ಬೇರೆ ಸೊಸೈಟಿಗಳಿಗೆ ಸರಬರಾಜು ಮಾಡಲಾಗುತಿದ್ದ ಗೊಬ್ಬರದ ಲಾರಿಗಳನ್ನು ತಡೆದು ನಿಲ್ಲಿಸಿದರು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು ಲಾರಿಗಳನ್ನು ಗೋದಾಮಿಗೆ ಮರಳಿಸಲಾಗುವುದು ಎಂದು ಹೇಳಿ ರೈತರ ಮನವೊಲಿಕೆ ಯತ್ನಿಸಿದರು. ಆದರೆ ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆಯನ್ನು ಕೈಬಿಟ್ಟು ಲಾರಿಗಳೊಂದಿಗೆ ಗೊಬ್ಬರ ವಿತರಣಾಲಯಕ್ಕೆ ಮರಳಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ:
ಟಿಎಪಿಎಸ್ಎಂಎಸ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ರೈತರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ ರೈತರಿಗೆ ಗೊಬ್ಬರ ವಿತರಿಸುವಂತೆ ಸೂಚಿಸಿದರು.